ಕಾರ್ಮಿಕರ ವೇತನ, ಬಾಕಿ ಪಿ.ಎಫ್- ಇ.ಎಸ್.ಐ – ವೇತನ ಪಾವತಿಸದಿದ್ದರೆ ಹೋರಾಟದ ಎಚ್ಚರಿಕೆ

ಸಿರವಾರ.ಆ.೩೦- ಸಿರವಾರ ವಿಭಾಗದ ಸಿರಿವಾರ, ಕವಿತಾಳ, ಮಾನವಿ ಮತ್ತು ಹೀರೆಕೊಟ್ನೇಕಲ್ ಉಪ ವಿಭಾಗದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ೨೦೧೮-೧೯, ೨೦೧೯-೨೦, ೨೦೨೦-೨೧ ಮೂರು ವರ್ಷಗಳಲ್ಲಿ ಅಕ್ರಮ ವೇತನ ಕಡಿತ ಮಾಡಿದ್ದನ್ನು ಮತ್ತು ಕಾರ್ಮಿಕರ ವೇತನದಲ್ಲಿ ಕಡಿತ ಮಾಡಿದ ಭವಿಷ್ಯನಿಧಿಯ ಕಾರ್ಮಿಕರ ಪಾಲು ೧೨% ಮತ್ತು ಉದ್ಯೋಗದಾತರ ಪಾಲು ೧೩% ಗುತ್ತೇದಾರರು ಮತ್ತು ಉದ್ಯೋಗದಾತರು ಕಡಿತ ಮಾಡಿದ್ದು, ಕಡಿತ ಮಾಡಿದ ಭವಿಷ್ಯನಿಧಿಯನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾರ್ಮಿಕರಿಗೆ ೪ ವರ್ಷದಿಂದ ಅಕ್ರಮವಾಗಿ ಭವಿಷ್ಯನಿಧಿಯನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ೧೫ ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾರ್ಮಿಕರು ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದರು.
ಸಿರವಾರ ಉಪವಿಭಾಗದಲ್ಲಿ ಇಂದು ಮನವಿ ಪತ್ರ ನೀಡಿದ ಕಾರ್ಮಿಕರು ವೇತನ ಹಾಗೂ ಪಿಎಫ್ ಕಡಿತವಾಗಿದೆ.ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಗಳ ಮತ್ತು ಗುತ್ತಿಗೆದಾರರಾದ ಮೇ? ಚೇತನ ಎಜೆನ್ಸಿಯ ಡಿ.ಸಿ.ರಾಜಣ್ಣ ವಿರುದ್ಧ ಕ್ರಮ ಕೈಗೊಂಡು ಸಿರಿವಾರ ವಿಭಾಗದ ನಾಲ್ಕು ಉಪವಿಭಾಗದ ಕಾರ್ಮಿಕರಿಗೆ ಬಾಕಿ ಇರುವ ಭವಿಷ್ಯನಿಧಿಯನ್ನು ಮತ್ತು ಅಕ್ರಮವಾಗಿ ವೇತನ ಕಡಿತ ಮಾಡಿದ್ದನ್ನು ತಕ್ಷಣ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು.
ಪ್ರಸ್ತುತ ಸಾಲಿನಲ್ಲಿ ಕಾರ್ಮಿಕರು ಕೆಲಸ ಮಾಡಿ ಎರಡು ತಿಂಗಳು ಕಳೆಯುತ್ತಿದ್ದರು ವೇತನ ಪಾವತಿ ಮಾಡದಿರುವುದನ್ನು ಖಂಡಿಸಿ ನಾವು ನಮ್ಮ ಸಂಘಟನೆಯ ನೇತೃತ್ವದಲ್ಲಿ ದಿನಾಂಕ: ೧೫-೦೯-೨೦೨೨ ರಿಂದ ವಿಭಾಗದ ಕಛೇರಿಯ ಮುಂದೆ ಮುಷ್ಕರ ಮಾಡಲಾಗುವುದು. ಇಲಾಖೆಯಿಂದ ಆಗಿರುವ ತಪ್ಪಿನಿಂದಾಗಿ ನಾವು ನಮಗೆ ನ್ಯಾಯಯುತವಾಗಿ ಬರಬೇಕಾದ ಪಿ.ಎಫ್, ಇಎಸ್.ಐ ಮತ್ತು ಬಾಕಿ ತುಟ್ಟಿಭತ್ಯೆಯು ಪಾವತಿಗಾಗಿ ಮುಷ್ಕರಕ್ಕೆ ಮುಂದಾಗಿದ್ದೇವೆ. ಈ ಮುಷ್ಕರದಲ್ಲಿ ಪಾಲ್ಗೊಳ್ಳುವ ಎಲ್ಲ ಕಾರ್ಮಿಕರ ವೇತನವೂ ತಾವು ಪಾವತಿಸಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ. ರಾಜಮಹ್ಮದ್, ಬಸವರಾಜ ಸಾಲಿಮಠ,ಯಲ್ಲಪ್ಪ ನವಲಕಲ್, ಚಾಂದ ಸಾಬ್, ಬಸವಲಿಂಗಪ್ಪ,, ರಾಮು, ಕಾಶಿಂ, ರಾಜು, ಬಸವಲಿಂಗಪ್ಪ, ಪುರುಷೋತ್ತಮ ಸೇರಿದಂತೆ ಇನ್ನಿತರರು ಇದ್ದರು.