ಕಾರ್ಮಿಕರ ರಕ್ಷಣೆಗೆ ಮೊದಲ ಆದ್ಯತೆ

ಕೋಲಾರ,ಏ.೭: ಕಾರ್ಮಿಕರ ಅಗ್ರಹಗಳೊಂದಿಗೆ, ಬೇಡಿಕೆಗಳೊಂದಿಗೆ, ಭವಿಷ್ಯದ ಆತಂಕಗಳನ್ನು ಹೊತ್ತು ನಾಳಿನ ಚಿಂತೆಯಲ್ಲಿ, ದೇಶದ ಪ್ರಗತಿಗಾಗಿ ಹಾಗೂ ಕುಟುಂಬ ಜೀವನ ನಿರ್ವಹಣೆಗಾಗಿ ಶ್ರಮಿಸುತ್ತಿರುವ ಕಾರ್ಮಿಕರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಅವರು ತಿಳಿಸಿದರು.
ನರಸಾಪುರ ಕೈಗಾರಿಕಾ ಪ್ರದೇಶದ ಹೊಂಡ ಕಂಪನಿಯಲ್ಲಿ ವಿವಿಧ ಕಂಪನಿಗಳ ಪ್ರತಿನಿಧಿಗಳ ಜೊತೆ ನಡೆದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನರಸಾಪುರ ಕೈಗಾರಿಕಾ ಪ್ರದೇಶ, ಮಾಲೂರು ಕೈಗಾರಿಕಾ ಪ್ರದೇಶ, ವೇಮಗಲ್ ಕೈಗಾರಿಕಾ ಪ್ರದೇಶ ಹಾಗೂ ಇಲ್ಲಿನ ಕಾರ್ಮಿಕರ ಆಡಳಿತವರ್ಗದ ಕುಂದುಕೊರತೆಗಳು ಸಮಸ್ಯೆಗಳನ್ನು ತಿಳಿದುಕೊಂಡು ಭವಿಷ್ಯದಲ್ಲಿ ಏನೇನು ಮಾಡಬೇಕು ಗುರುತಿಸಿಕೊಳ್ಳಬೇಕು. ಸಮಸ್ಯೆಯ ಮೂಲವನ್ನು ಅರಿತುಕೊಂಡು ಯಾವ ರೀತಿಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಸಂಪನ್ಮೂಲಗಳು
ಎಷ್ಟಿವೆ, ಅವಕಾಶಗಳಿಗಾಗಿ ಏನೇನು ಮಾಡಬೇಕು ಎಂಬ ಕಾರ್ಯ ಪ್ರಣಾಳಿಕೆ ಮಾಡುವ ಅವಶ್ಯಕತೆ ಇದೆ. ಎಲ್ಲಾ ಕಂಪನಿಗಳವರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಅನಿಸಿಕೆಗಳನ್ನು ಮುಕ್ತವಾಗಿ ನೀಡಿದರೆ, ಕೋಲಾರ ಜಿಲ್ಲಾ
ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಅವಲೋಕಿಸಿ ಸಮಸ್ಯೆಗಳ ಬಗ್ಗೆ ಗಮನ ಅರಿಸಲಾಗುವುದು ಎಂದರು. ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಬಗ್ಗೆ ಪ್ರಶಂಸೆಗಳು ಕೇಳಿ ಬಂದಿದೆ. ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತಗಳ ಬಗ್ಗೆ ದೂರುಗಳು ಬಂದಿವೆ ಈ ಬಗ್ಗೆ ಗಮನಹರಿಸಲಾಗುವುದು. ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲು ಹಾಗೂ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್ ಠಾಣೆ ತೆರೆಯಲು ಪ್ರಸ್ತಾವನೆ ಕಳಿಸಿದ್ದೇವೆ. ರಾತ್ರಿ ವೇಳೆ ಕಳ್ಳತನ, ಬೆದರಿಕೆ , ಕರ್ತವ್ಯಕೆ ಅಡ್ಡಿಪಡಿಸುವುದು, ಮುಂತಾದ ಅಡೆತಡೆಗಳ ಬಗ್ಗೆ ದೂರುಗಳು ಕೇಳಿಬಂದಿವೆ. ಅವುಗಳ ಬಗ್ಗೆ ಗಮನ ಹರಿಸಿ ಸಮಸ್ಯೆಗಳು ಮರುಕಳಿಸದಂತೆ ಕ್ರಮವಹಿಸಲಾಗುವುದು. ರಾತ್ರಿಪಾಳಿ ಹೆಚ್ಚುವರಿ ಗಸ್ತು ಪೊಲಿಸ್ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಡಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು ಮಾತನಾಡಿ, ವಿಸ್ಟ್ರಾನ್ ಘಟನೆ ಮರುಕಳಿಸದಂತೆ ಕಾರ್ಮಿಕ ಇಲಾಖೆ ಕಾರ್ಯಪ್ರವೃತ್ತರಾಗಬೇಕು. ಪ್ರಾರಂಭಿಕ ಹಂತದಲ್ಲೇ ಸಮಸ್ಯೆಯನ್ನು ಬಗೆಹರಿಸಬೇಕು. ಒಬ್ಬರಿಂದ ಎಲ್ಲರಿಗೂ ತೊಂದರೆಯಾಗಬಾರದು. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಸೆಕ್ಸ್ ವರ್ಕರ್ ಗಳ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ವಿವಿಧ ಸಂಘಟನೆಗಳ ಉದ್ಯೋಗಿಗಳಿಗೆ ಕಿರಿಕಿರಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆಯಲ್ಲಿ ನಾಲ್ಕು ಜನರ ಮೇಲೆ ಚಾರ್ಜಶಿಟ್ ಹಾಕಲಾಗಿದೆ . ೧೭೦ ಜನರ ಮೇಲೆ ಕೇಸ್ ಮಾಡಲಾಗಿತ್ತು. ತನಿಖೆಯಲ್ಲಿಉದ್ಯೋಗಿಗಳಿಗೆ ಸಮಯಕ್ಕೆ ಸಂಬಳ ಕೊಡದಿರುವುದು, ಓ.ಟಿ
ನೀಡಿಲ್ಲ, ಹಾಗೂ ಹಾಜರಾತಿ ಸಮಸ್ಯೆ ಕಂಡುಬಂದಿದೆ. ಇತ್ತೀಚೆಗೆ ನಕಲಿ ಕರಪತ್ರಗಳು, ನಕಲಿ ಫೋನ್ ಕಾಲ್ ಗಳ ಮೂಲಕ ಉದ್ಯೋಗ ಕೊಡಿಸುವುದಾಗಿ ದೂರುಗಳು ಕೇಳಿಬಂದಿವೆ ಇವೆಲ್ಲದರ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ಕೋಲಾರ ಡಿ.ವೈ.ಎಸ್.ಪಿ ಸುಹೀಲ್ ಬಾಗ್ಲಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಮಹಮ್ಮದ್ ಇರ್ಪಾನ್, ಹೊಂಡ ಕಂಪನಿಯ ಆಪರೇಟಿಂಗ್ ಹೆಡ್ ಸುನೀಲ್ ಕುಮಾರ್ ಮಿತ್ತಲ್ ಸೇರಿದಂತೆ ವಿವಿಧ ಕಂಪನಿಗಳ ಆಡಳಿತ ವರ್ಗದವರು ಉಪಸ್ಥಿತರಿದ್ದರು.