ಕಾರ್ಮಿಕರ ಮಧ್ಯ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಡಾ.ನಾಗವೇಣಿ

ರಾಯಚೂರು,ಜ.೧೪- ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್ ಅವರು ತಮ್ಮ ಹುಟ್ಟು ಹಬ್ಬವನ್ನು ಸಿಂಧನೂರಿನಲ್ಲಿ ಬಡ ಕೂಲಿ ಕಾರ್ಮಿಕರ ಮದ್ಯ ಸರಳವಾಗಿ ಆಚರಿಸಿಕೊಂಡರು.
ಡಾ.ನಾಗವೇಣಿ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಕೊಳಚೆ ಪ್ರದೇಶಕ್ಕೆ ತೆರಳಿ ಅಲ್ಲಿ ವಾಸಿಸುವ ಬಡ ಕೂಲಿ ಕಾರ್ಮಿಕರ ಮದ್ಯ ಹುಟ್ಟುಹಬ್ಬವನ್ನು ಆಚರಿಸಿಕೊಂಡರು
ಸ್ಲಂ ನಿವಾಸಿಗಳ ಮಧ್ಯೆ ಕೆಕ್ ಕತ್ತರಿಸಿದ ಡಾ. ನಾಗವೇಣಿ ಅವರು ಬಡ ಕೂಲಿ-ಕಾರ್ಮಿಕರಿಗೆ ಬ್ಲಾಕೇಟ್ಗಳನ್ನು ವಿತರಿಸಿ ಚಿಕ್ಕ ಮಕ್ಕಳಿಗೆ ಕೇಕ್ ಮತ್ತು ಜ್ಯೂಸನ್ನು ನೀಡಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಕಳೆದ ಎರಡು ವರ್ಷಗಳ ಹಿಂದೆ ಕರೋನ ಮಹಾಮಾರಿ ಅಪ್ಪಳಿಸಿತ್ತು ಆಗ ಪಟ್ಟಣದ ವೃದ್ಧಾಶ್ರಮ ಸೇರಿದಂತೆ ಹಲವಾರು ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡವರಿಗೆ ದಿನಬಳಕೆ ದಿನಸಿ ತರಕಾರಿ ಹಾಲು ಚಿಕ್ಕ ಮಕ್ಕಳಿಗೆ ಜ್ಯೂಸ್ ನೀಡಿ ನಿರಂತರ ನನ್ನ ಕೈಲಾದ ಸೇವೆಯನ್ನು ನಿಮಗೆ ಮಾಡಿದ್ದೇನೆಂದು ಅಂದಿನ ನೆನಪುಗಳನ್ನು ಡಾ.ನಾಗವೇಣಿ ಅವರು ಹಂಚಿಕೊಂಡರು.