ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ವಿತರಣೆಗೆ ಒತ್ತಾಯ

ಹರಪನಹಳ್ಳಿ.ನ.೧೭: ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ವಿತರಣೆಗೆ ಪ್ರಸಕ್ತ ಸಾಲಿನಲ್ಲಿ ಅರ್ಜಿ ಆಹ್ವಾನಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದ ವೃತ್ತದಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ನಂತರ ನಡೆದ ಬಹಿರಂಗ ಸಭೆ ಮೂಲಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.2022-23ನೇ ಶೈಕ್ಷಣಿಕ ವರ್ಷ ಆರಂಭವಾಗಿ ಆರು ತಿಂಗಳಾದರೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿAದ ಶೈಕ್ಷಣಿಕ ಸಹಾಯಧನ ನೀಡುವ ಬಗ್ಗೆ ಅರ್ಜಿ ಆಹ್ವಾನಿಸದೇ ನಿರ್ಲಕ್ಷ್ಯವಹಿಸಿದೆ. ದುಬಾರಿ ಶುಲ್ಕದ ಕಾಲದಲ್ಲಿ ಕಾರ್ಮಿಕರ ಮಕ್ಕಳ ಬದುಕು ಬೀದಿ ಪಾಲಾಗುವ ಹಂತ ತಲುಪಿದೆ. ಇದರ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ, ಸ್ಪಷ್ಟವಾದ ಮಾಹಿತಿ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.2021-22ನೇ ಸಾಲಿನಲ್ಲಿ ಬಾಕಿಯಿರುವ ಶೈಕ್ಷಣಿಕ ಸಹಾಯಧನ ಮಂಜೂರು ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಶೀಘ್ರವೇ ಅರ್ಜಿ ಆಹ್ವಾನಿಸಬೇಕು ಎಂದು ಆಗ್ರಹಿಸಿದರು.ತಾಲ್ಲೂಕು ಕಾರ್ಯದರ್ಶಿ ಡಿ.ಎಚ್. ಅರುಣ್ ಕುಮಾರ, ಎಚ್.ಎಂ.ಸAತೋಷ್, ಚಂದ್ರನಾಯ್ಕ, ರಮೇಶ ನಾಯ್ಕ, ಬಳಿಗನೂರು ಕೊಟ್ರೇಶ್, ನಂದೀಶ್, ಕರಿಬಸವರಾಜ, ಆಕಾಶ್, ದೊಡ್ಡಬಸವರಾಜ, ವೀರೇಶ, ಜಯಕುಮಾರ, ಪಿ. ಬಸವರಾಜ್ ಇತರರಿದ್ದರು.