ಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಹೋರಾಟ ನಿಶ್ಚಿತ

ಲಿಂಗಸೂಗೂರು.ನ.೨೫-ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ವಿಳಂಬ ನೀತಿ ಅನುಸರಿಸಿದರೆ ಮುಷ್ಕರದಂಥಹ ಪರೀಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಏಐಟಿಯುಸಿ ಹಟ್ಟಿ ಘಟಕದ ಎಚ್ಚರಿಸಿದರು.
ಕಂಪನಿ ಹಿರಿಯ ವ್ಯವಸ್ಥಾಪಕ(ಮಾನವ ಸಂಪನ್ಮೂಲ)ಯಮನೂರಪ್ಪರಿಗೆ ಗಣಿ ಕಂಪನಿ ಮುಖ್ಯದ್ವಾರದ ಮುಂದೆ ಏಐಟಿಯುಸಿ ಮನವಿ ಸಲ್ಲಿಸಿದ ನಂತರ ಮಾತನಾಡಿದರು. ಏಪ್ರಿಲ್ ೨೦೨೧ರಿಂದ ವೇತನ ಒಪ್ಪಂದ ಜಾರಿಯಾಗಲು ಕಾರ್ಮಿಕ ಸಂಘದ ಚುನಾವಣೆ ಅಡ್ಡಿಯಾಗಿದ್ದರಿಂದ ಮೂಲ ವೇತನ ಮತ್ತು ಕೈಗಾರಿಕೆ ತುಟ್ಟಿ ಭತ್ಯೆಯಾಗಿ ಶೇ೧೦ರಷ್ಟು ಮಧ್ಯಂತರ ಪರಿಹಾರ ನೀಡಬೇಕು. ಈ ಹಿಂದೆ ವಿಆರ್‌ಎಸ್ ಹಾಗೂ ಮೆಡಿಕಲ್ ಅನ್‌ಫಿಟ್ ಆಧಾರದ ಮೇಲೆ ಕಾರ್ಮಿಕ ಅವಲಂಬಿತರಿಗೆ ನೌಕರಿ ನೀಡುವ ಯೋಜನೆ ಮುಂದುವರೆಸಬೇಕು. ಬಾಕಿ ಉಳಿದ ಬೋನಸ್ ವಿತರಿಸಬೇಕು. ಶೀಘ್ರವೆ ವಿಭಾಗೀಯ ಬಡ್ತಿ ಪ್ರಕ್ರಿಯೆ ಮುಗಿಸಬೇಕೆಂದು ಒತ್ತಾಯಿಸಿದರು. ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ವೇತನ ಒಪ್ಪಂದ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಶೀಘ್ರದಲ್ಲೆ ಇತ್ಯರ್ಥಪಡಿಸಬೇಕೆಂದು ಏಐಟಿಯುಸಿ ಹಟ್ಟಿ ಘಟಕದ ಅಧ್ಯಕ್ಷ ಶಾಂತಪ್ಪ ಆನ್ವರಿ ಒತ್ತಾಯಿಸಿದರು.
ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ ಹೆಚ್.ರಮೇಶ್ ಏಐಟಿಯುಸಿ ಪ್ರಮುಖರಾದ ವೆಂಕೋಬ್ ಮಿಯ್ಯಾಪೂರ್, ಯಲ್ಲಪ್ಪ ಗುರುಗುಂಟಕರ್, ಸಿದ್ಧಪ್ಪ ಮುಂಡರಗಿ, ಅಬ್ರಹಾಂ, ಮೈನುದ್ದೀನ್, ಶಾಂತಪ್ಪ ಮಳ್ಳಿ, ನಾಗರೆಡ್ಡಿ ಜೇರಬಂಡಿ, ಪಾಮಣ್ಣ, ತಿಪ್ಪಣ್ಣ ಮಾಚನೂರು ಇದ್ದರು.