ಕಾರ್ಮಿಕರ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

????????????????????????????????????

ತುಮಕೂರು, ಜು. ೧೬- ಕನಿಷ್ಠ ವೇತನ ಪಟ್ಟಿಯಲ್ಲಿರುವ ದುಡಿಯುವ ಎಲ್ಲಾ ಕಾರ್ಮಿಕರಿಗೆ ಸಮಾನ ಕನಿಷ್ಠ ಕೂಲಿಯಾಗಿ ಮಾಸಿಕ ೩೫,೯೩೧ ರೂಪಾಯಿ ನಿಗದಿಗೊಳಿಸಬೇಕು, ತುಟ್ಟಿ ಭತ್ಯೆ ಅಂಕ ಒಂದಕ್ಕೆ ೬ ಪೈಸೆ ಮತ್ತು ೩ ವರ್ಷಕ್ಕೆ ಒಮ್ಮೆ ಕನಿಷ್ಟ ಕೂಲಿ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕನಿಷ್ಠ ಎರಡು ಕೋಟಿ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನದ ಕಾನೂನಾತ್ಮಕ ಹಕ್ಕು ಒದಗಿಸುತ್ತದೆ. ಸರ್ಕಾರ ಮಾಲೀಕರು ಮತ್ತು ಅಧಿಕಾರಿಗಳ ಮಾತುಗಳನ್ನು ಕೇಳದೆ ಸುಪ್ರೀಂ ಕೋರ್ಟ್‌ನ ರೆಪಟ್ಕೋಸ್ ಬ್ರೆಟ್ ಆದೇಶದಲ್ಲಿ ನೀಡಲಾಗಿರುವ ಸೂತ್ರಗಳ ಅನ್ವಯ ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರದ ಪ್ರಮಾಣ, ವೈಜ್ಞಾನಿಕವಾದ, ತಾರ್ಕಿಕವಾದ ಮತ್ತು ೧೫ನೇ ಭಾರತ ಕಾರ್ಮಿಕ ಸಮ್ಮೇಳನವು ನೀಡಿರುವ ಸ್ಥಾಪಿತ ಶಾಸನಬದ್ಧ ವಿಧಾನಗಳು ಅನ್ವಯ ನಿಗದಿ ಮಾಡುವಂತೆ ಒತಾಯಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ಕನಿಷ್ಠ ವೇತನದ ಅomಠಿoಟಿeಟಿಣs ಆದ ಆಹಾರ, ಬಟ್ಟೆ, ವಸತಿ, ಇಂಧನ, ನೀರು ಮತ್ತು ಮಕ್ಕಳ ಶಿಕ್ಷಣ ಇವುಗಳನ್ನು ಲೆಕ್ಕಕ್ಕೆ ಪರಿಗಣಿಸದೆ ಕನಿಷ್ಟ ವೇತನ ಸಲಹಾ ಮಂಡಳಿ ಛೇರ್ಮನ್ ಬೆಚ್ಚಿ ಬೀಳುವ ರೀತಿಯಲ್ಲಿ ಕನಿಷ್ಠ ವೇತನವನ್ನು ಈಗಿರುವ ಕನಿಷ್ಠ ವೇತನದ ಕೇವಲ ಶೇ. ೧೦ ರಷ್ಟು ಮಾತ್ರ ಪರಿಷ್ಕರಿಸುವುದಾಗಿ ಕಾರ್ಮಿಕರಿಗ ಮಾಡುವ ಮೋಸ ಎಂದರು.
ಪೌರ ಕಾರ್ಮಿಕ ಸಂಘಟನೆ ಸಿ. ವೆಂಕಟೇಶ್ ಮಾತನಾಡಿ, ತಳಸ್ಪರ್ಶಿಯಾಗಿ ದುಡಿಯುವವರ ಕೂಲಿಗೆ ಅತಿ ಕಡಿಮೆ ನಿಗದಿ ಮಾಡುವುದು ಅನ್ಯಾಯ ಎಂದರು.
ಕಸದ ಅಟೋ ಚಾಲಕರು ಸಂಘದ ಶಿವರಾಜು, ಮಂಜುನಾಥ್, ಪೌರ ಕಾರ್ಮಿಕ ನಾಗರಾಜು, ಚಿಕ್ಕನಾಯಕನಹಳ್ಳಿಯ ರಘು, ತಿಪಟೂರು ರಮೇಶ್, ಗುಬ್ಬಿಯ ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ರಂಗಮ್ಮ ಪ್ರತಿಭಟನೆಯಲ್ಲಿ ಮಾತನಾಡಿದರು.
ಮನವಿಯನ್ನು ಜಿಲ್ಲಾ ಕಾರ್ಮಿಕ ಆಧಿಕಾರಿ ರಮೇಶ್ ಅವರು ಸ್ವೀಕರಿಸಿ ಕನಿಷ್ಟ ಕೂಲಿ ಬಗ್ಗೆ ಕಾರ್ಮಿಕರ ಆಗ್ರಹವನ್ನು ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದರು.
ಮುನಿಸಿಪಾಲ್ ಕಾರ್ಮಿಕರು , ಅಸ್ವತ್ರೆ ಕಾರ್ಮಿಕರು, ವಿ.ವಿ.ಯಲ್ಲಿನ ಸ್ವಚ್ಚತಾ ಕಾರ್ಮಿಕರು ಕನಿಷ್ಟ ಕೂಲಿ ತುಟ್ಟಿ ಭತ್ಯೆ, ವಾರದ ರಜೆ, ಹಬ್ಬದ ರಜೆ, ಗಳಿಕೆ ರಜೆ, ಸಾಂದರ್ಭಿಕ ರಜೆಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಸಂಬಳದ ಚೀಟಿ ನೀಡುತ್ತಿಲ್ಲ. ಕಾರ್ಮಿಕ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕಾನೂನು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಮುನಿಸಿಪಲ್ ಕಾರ್ಮಿಕರಿಗೆ ೧೫ ದಿನಗಳಿಂದ ತಿಂಡಿ ನೀಡುತ್ತಿಲ್ಲ. ವಿಪರೀತ ಮಳೆಯಾದರೂ ರೈನ್ ಕೋಟ್, ಸಮವಸ್ತ್ರ, ಸುರಕ್ಷತಾ ಸಲಕರಣೆ ನೀಡುತ್ತಿಲ್ಲ ಎಂದು ಪ್ರತಿಭಟನಾಕರಾರು ತೀವ್ರ ಅಸಮಧಾನ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಮುನ್ಸಿಫಲ್ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಅಸ್ವತ್ರೆ, ವಿ.ವಿ. ಕಾರ್ಮಿಕರು ಭಾಗವಹಿಸಿದ್ದರು.