ಕಾರ್ಮಿಕರು ೩ ತಾಸು ಕೆಲಸ ಬಂದ್ : ಪರುಶುರಾಮ ಕೆಂಭಾವಿ ವಿರುದ್ಧ ಕಾರ್ಮಿಕರು ಆಕ್ರೋಶ

ಪುರಸಭೆ ಅಧ್ಯಕ್ಷೆ ಪತಿ ನೌಕರರಿಗೆ ಕಿರುಕುಳ
ಲಿಂಗಸುಗೂರು.ಜು,೧೯- ಪುರಸಭೆ ಆಡಳಿತ ಮಂಡಳಿ ಅಧ್ಯಕ್ಷೆ ಸುನೀತಾ ಕೆಂಭಾವಿ ಇವರು ಚುನಾವಣೆಯಲ್ಲಿ ಸಂವಿಧಾನದ ಪ್ರಕಾರ ಚುನಾಯಿತ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುತ್ತಿರುವ ಈಗಿರುವ ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಇವರ ಪತಿರಾಯ ಪರುಶುರಾಮ ಕೆಂಭಾವಿ ಇವರು ಆಡಳಿತದಲ್ಲಿ ವಿನಾಃ ಕಾರಣ ಸರ್ಕಾರಿ ಪುರಸಭೆ ನೌಕರರ ಮೇಲೆ ಏಕವಚನದಲ್ಲಿ ಕರೆಯುವುದು ನಿಂದಿಸುವ ಮೂಲಕ ಸರ್ಕಾರಿ ಕೆಲಸಗಳಲ್ಲಿ ಅಡ್ಡಿಪಡಿಸುವ ಮುಖಾಂತರ ನೌಕರರಿಗೆ ಮಾನಸಿಕ ಕಿರುಕುಳ ನೀಡಿದ ಪಕರಣ ಇಂದು ಬೆಳಗ್ಗೆ ಪುರಸಭೆ ಆವರಣದಲ್ಲಿ ಕಂಡುಬಂದಿದೆ.
ಪುರಸಭೆ ನೌಕರರು ಕಾರ್ಮಿಕರು ಏಕಾಏಕಿ ಕೆಲಸ ಬಂದ್ ಮಾಡಿ ಅಧ್ಯೆಕ್ಷೆ ಪತಿ ವಿರುದ್ಧ ಆಕ್ರೋಶ ಪುರಸಭೆ ನೌಕರರು ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿಸಿ ಮಾನಸಿಕ ಒತ್ತಡ ಹಾಕಿ ನಮಗೆ ಇಲ್ಲಸಲ್ಲದ ನೆಪವೊಡ್ಡಿ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಕಾರ್ಮಿಕರು ಮಹಿಳೆಯರು ಪಿಕೆಎಸ್ ಕಾರ್ಮಿಕರು ನೌಕರರು ತಮ್ಮ ಅಳಲನ್ನು ಪತ್ರಿಕೆ ಮೂಲಕ ತೊಡಗಿಕೊಂಡಿದ್ದಾರೆ.
ಕೂಡಲೇ ಪುರಸಭೆ ನೌಕರರ ಸಂಘದ ಅಧ್ಯಕ್ಷ ಹಾಗೂ ಸಿಬ್ಬಂದಿ ಸೇರಿಕೊಂಡು ಪುರಸಭೆಯ ಅಧ್ಯಕ್ಷೆ ಪತಿ ಪರುಶುರಾಮ ಕೆಂಭಾವಿ ಇವರ ಮೇಲೆ ಕ್ರಮ ಕೈಗೊಳ್ಳಲು ನೌಕರರ ಸಂಘದ ಸದಸ್ಯರು ಕಾರ್ಮಿಕರು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿದೆ .
ಪುರಸಭೆ ನೌಕರರಿಗೆ ರಕ್ಷಣೆ ಇಲ್ಲದೆ ಕಾರ್ಮಿಕರು ಪರದಾಟ ಚುನಾಯಿತ ಪ್ರತಿನಿಧಿಗಳಿಂದ ನೌಕರರು ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿಸುವ ಚುನಾಯಿತ ಪ್ರತಿನಿಧಿಗಳು ಮಾನಸಿಕ ಕಿರುಕುಳ ಕಾರ್ಮಿಕರಿಗೆ ರಕ್ಷಣೆ ಇಲ್ಲದೆ ಪರದಾಡುವಂತಾಗಿದೆ.
ಪರುಶುರಾಮ ಕೆಂಭಾವಿ ಇವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಆಡಳಿತ ಮಂಡಳಿ ಸದಸ್ಯರು ಇವರ ವಿರುದ್ಧ ಒಳ ಒಳಗೇ ಬೇಗುದಿ ಎದ್ದಿರುವ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ ಎಂಬುದು ಕಂಡುಬರುತ್ತದೆ.
ಕೂಡಲೇ ಅಧಿಕಾರಿಗಳು ಚುನಾಯಿತ ಸದಸ್ಯರ ಅಲ್ಲದೆ ಇರುವ ಸದಸ್ಯರಿಗೆ ಯಾವುದೇ ರೀತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದು ಈಗಾಗಲೇ ಸರ್ಕಾರ ಗ್ರಾಮ ಪಂಚಾಯತ್ ಆಡಳಿತದಲ್ಲಿ ನೊಟೀಸ್ ಜಾರಿ ಮಾಡಿದೆ ಅದರಂತೆ ಪುರಸಭೆ ಆಡಳಿತ ಮಂಡಳಿ ಸದಸ್ಯರಿಗೆ ಮಾತ್ರ ಅಧಿಕಾರ ಇರುತ್ತದೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಪುರಸಭೆ ಕಾಯ್ದೆ ಪ್ರಕಾರ ಚುನಾಯಿತ ಪ್ರತಿನಿಧಿಗಳು ಮಾತ್ರ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪರುಶುರಾಮ ಕೆಂಭಾವಿ ಇವರ ಮೇಲೆ ಕ್ರಮ ಕೈಗೊಳ್ಳಲು ಸಾಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲು ನೌಕರರ ಸಂಘ ಬದ್ದ ಇಂದು ಬೆಳಗ್ಗೆ ನಡೆದ ಘಟನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಇವರ ಪತಿ ಪರುಶುರಾಮ ಕೆಂಭಾವಿ ಇವರು ಆಡಳಿತದಲ್ಲಿ ವಿನಾಃ ಕಾರಣ ಹಸ್ತಕ್ಷೇಪ ಮಾಡುವುದು ಭಾರತದ ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿಸುವುದು ನಿಯಮ ಬಾಹಿರವಾಗಿದೆ ಇದರಿಂದಾಗಿ ಕಾರ್ಮಿಕರು ನೌಕರರು ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿಸುವ ಕೆಂಭಾವಿ ಇವರ ಮೇಲೆ ಕ್ರಮ ಕೈಗೊಳ್ಳಲು ಲಿಂಗಸುಗೂರು ಸಾಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಾರ್ಮಿಕರು ಸೇರಿದಂತೆ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಇವರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಸಂಜೆವಾಣಿ ಪತ್ರಿಕೆ ವರದಿಗಾರರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ, ರಾಘವೇಂದ್ರ, ಶಹನವಾಜ, ವೆಂಕಟೇಶ್ ಮೂರ್ತಿ, ವಿರೇಶ, ಗೀರಿಜಾ, ಸುಜಾತ ಅಂಗಡಿ ಸೇರಿದಂತೆ ನೌಕರರ ಸಂಘದ ಸದಸ್ಯರು ಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು.