ಕಾರ್ಮಿಕರು ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು ಜೂ:19  ಮಂಡಳಿಯಿಂದ ಸಿಗುವ ಸೌಲಭ್ಯಗಳಾದ ಪಿಂಚಣಿ ಕುಟುಂಬ ಪಿಂಚಣಿ ಸೌಲಭ್ಯ ಹೆರಿಗೆ ಸೌಲಭ್ಯ ಸೈಕ್ಷಣಿಕ ಧನ ಸಹಾಯ ವೈದ್ಯಕೀಯ ಪ್ರಮುಖ. ವೈದ್ಯಕೀಯ ಸಹಾಯಧನ ಹೀಗೆ ಮಂಡಳಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಶನ್ ತೋರಣಗಲ್ಲು ಗ್ರಾಮದಲ್ಲಿ ಸೂರಿ ಭವನದಲ್ಲಿ ಸಮಾವೇಶ ನಡೆಯಿತು. ಈ ಸಮಾವೇಶವನ್ನು ತಾ. ಅಧ್ಯಕ್ಷ ವಿ. ದೇವಣ್ಣ ನವರು ಉದ್ಘಾಟಿಸಿ ಮಾತನಾಡಿದರು. ಇ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಎನ್. ಶಂಕ್ರಣ್ಣ ಮಾತನಾಡಿದರು.
ನೂತನ ಸಮಿತಿಗೆ ಆಯ್ಕೆ : ಎನ್. ಶಂಕ್ರಣ್ಣ, ಗೌರವಾಧ್ಯಕ್ಷ, ವಿ. ವೆಂಕಟೇಶ್, ಅಧ್ಯಕ್ಷ ವಿ. ತಿಮ್ಮಪ್ಪ ವಿ. ಗೋವಿಂದ ರಾಜು ಉಪಾಧ್ಯಕ್ಷರುಗಳಾಗಿ ಆಯ್ಕೆಯಾದರು. ಎನ್. ಶಂಕ್ರಪ್ಪ ಯು. ಲಕ್ಷ್ಮಣ ಸಹಾಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರತಾಪ್ ರವರು ಖಜಾಂಚಿಯಾಗಿ ಆಯ್ಕೆಯಾದರು. ಅಲ್ಲದೇ ಜಾನಿ ಕುಂಟೆ ಸ್ವಾಮಿ ವಿ. ಗೋವಿಂದ, ವಿ. ಶಿವರಾಜ ಎನ್. ನಾಗರಾಜ ವಿ. ರಾಮಾಂಜಿನಿ ಎನ್. ಭೀಮೇಶ ಎನ್. ಅಂಜಿ ಎನ್. ಸುಧಾಕರ ಹೀಗೆ 9 ಜನ ಸಮಿತಿಯ ಸದಸ್ಯರು ಅವಿರೊದವಾಗಿ ಆಯ್ಕೆಯಾದರು ಎಂದು ಅಧ್ಯಕ್ಷ ವಿ. ವೆಂಕಟೇಶ್ ರವರು ತಿಳಿಸಿದರು.