ಕಾರ್ಮಿಕರು ರೈತರಿಗೆ ನೀರು ನೀಡುವ ಜೀವದಾತ್ತ ನಾಗಲಿಂಗಸ್ವಾಮಿ

ಸಿರವಾರ.ಮೇ.೩೦-ನಮ್ಮ ಭಾಗದ ರೈತರಿಗೆ ಹಗ್ಗಲು ರಾತ್ರಿ ಎನ್ನದೇ ಸಮರ್ಪಕವಾಗಿ ನೀರು ಒದಗಿಸಿ ಬೇಳೆ ರಕ್ಷಣೆ ಮಾಡುವ ಜೀವದಾತ್ತರು ನಮ್ಮ ಕಾರ್ಮಿಕರಾಗಿದ್ದಾರೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದಅಧ್ಯಕ್ಷರಾದ ಕೆ.ನಾಗಲಿಂಗಸ್ವಾಮಿ ವಕೀಲರುಹೇಳಿದರು.
ಪಟ್ಟಣದಲ್ಲಿ ಇಂದು ಬೆಳಗ್ಗೆ ೧೩೫ನೇ ಕಾರ್ಮಿಕ ದಿನಾಚರಣೆ ಹಾಗೂ ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಕಾರ್ಯಾಲಯವನ್ನು ಸಂಘದ ಉದ್ಘಾಟಿಸಿ ಮಾತನಾಡಿದ ಅವರು ಕಡಿಮೆ ವೆತನ ಇದ್ದರೂ ಅದರಲಿಯೇ ತೃಪ್ತಿಪಡುತ್ತಾ ಕೆಲಸವನ್ನು ನಿಷ್ಠೆಯಿಂದ ಮಾಡುವ ನಮ್ಮ ಕಾರ್ಮಿಕರ ಶ್ರಮ ಏಷ್ಟು ಕೊಂಡಾಡಿದರೂ ಸಾಲದು. ಕಾರ್ಮಿಕರು ಇಲ್ಲದೆ ಬೆಸಿಗ್ಗೆ ಬೆಳೆಗೆ ಸಮರ್ಪಕವಾಗಿ ನೀರು ನಿಡಲು ಅದಿಕಾರಿಗಳಿಂದ ಸಾದ್ಯವಾಗಲಿಲ. ಒಗ್ಗಟಾಗಿ ನಮ್ಮ ಬೇಡಿಕೆ ಈಡೇರಿಸಿಕೊಳೊಣ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಮರಕಮದಿನ್ನಿ, ಉಪಾಧ್ಯಕ್ಷ ಪುರುಷೋತ್ತಮ, ಖಜಾಂಚಿ ಜಲಾಲ್ ಪಾಷ, ನಾಗಲೀಕರ್, ಪರಶುರಾಮ, ನಾಗರಾಜ, ಕಾಸಿಂ, ರಮೇಶ, ರಾಮಣ್ಣ, ಭೀಮರಾಜ, ಈಶಪ್ಪಗೌಡ, ಗೌಸ್ ಕುರ್ಡಿ ಸೇರಿದಂತೆ ಅನೇಕರು ಇದ್ದರು.