ಕಾರ್ಮಿಕರು ಕೊವಿಡ್ ಲಸಿಕೆ ಪಡೆಯಲು ನಾಜಿಯಾ ಸುಲ್ತಾನ್ ಕರೆ

ಲಿಂಗಸಗೂರು.ಜೂ.೦೫-ಜಿಲ್ಲೆಯಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿದ್ದು ಕಟ್ಟಡ ಕಾರ್ಮಿಕರು ಸೇರಿದಂತೆ ಕಾರ್ಮೀಕರು ಕೊವಿಡ್ ಲಸಿಕೆ ಪಡೆದು ಕೊರೊನಾದಿಂದ ರಕ್ಷಣೆ ಪಡೆಯುವುದು ಸೂಕ್ತವಾಗಿದ್ದು ಎಲ್ಲರು ಲಸಿಕೆ ಪಡೆಯುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಜಿಯಾ ಸುಲ್ತಾನ್ ಕರೆ ನೀಡಿದ್ದಾರೆ.
ಜೂನ್ ೨ರಂದು ಜಿಲ್ಳಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊವಿಡ್ ಲಸಿಕೆ ಹಾಕುವ ಕುರಿತು ಚರ್ಚಿಸಿ ಜಿಲ್ಲೆಯಾದ್ಯಂತ ನಗರ ಹಾಗೂ ಸ್ಥಳಿಯ ವ್ಯಾಪ್ತಿಯಲ್ಲಿ ಬರುವ ಕಟ್ಟಡ ಕಾರ್ಮಿಕರಿಗೆ ಜೂನ್ ೩ರಿಂದ ಹಾಕಿಸಲು ನಿರ್ದೇಶನ ನೀಡಿರುತ್ತಾರೆ ಲಾಕ್ ಡೌನ್ ಅವಧಿಯಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಕಟ್ಟಡ ಕಾರ್ಮಿಕರು ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು ಹಾಗೂ ಅವರ ಕುಟುಂಬದ ಸದಸ್ಯರಿಗೂ ಕೊರೊನಾ ವೈರಸ್ ಸಮಸ್ಯೆ ಬಾದಿಸದಿರಲು ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯವಾಗಿದೆ ಇದು ಸರಕಾರದ ನಿರ್ಣಯವಾಗಿದ್ದು ಸರ್ಕಾರದ ನಿರ್ದೇಶನದಂತೆಯೆ ಲಸಿಕೆಯನ್ನು ಹಾಕಿಸಲಾಗುತ್ತಿದೆ ಇದರಿಂದ ಯಾವುದೆ ಅಡ್ಡಪರಿಣಾಮಗಳು ಆಗಿರುವ ಉದಾಹರಣೆಗಳಿಲ್ಲ ಅನಾವಶ್ಯಕ ಸುಳ್ಳು ಮಾಹಿತಿಯಿಂದ ಲಸಿಕೆ ಹಾಕಿಸಿಕೊಳ್ಳುವುದನ್ನು ನಿರಾಕರಿಸದೆ ತಮ್ಮ ಹಾಗೂ ತಮ್ಮ ಕುಟುಂಬದ ಹಿತದೃಷ್ಟಿಯಿಂದ ಕೊವಿಡ್ ಲಸಿಕೆ ಹಾಕಿಸಿಕೊಂಡು ಕೊವಿಡ್ ಸಂಕಷ್ಟದಿಂದ ಪಾರಾಗಲು ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರ ಬಂಧುಗಳು ಕಡ್ಡಾಯವಾಗಿ ಕೊವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ಕಾರ್ಮಿಕ ಇಲಾಖೆಯು ಕೊವಿಡ್ ವಾರಿಯರ್‍ಸ್ ನೇಮಕ ಮಾಡಲಾಗಿದ್ದು ವಾರಿಯರ್‍ಸ್ ಹಾಗೂ ಕಾಯಕ ಬಂಧುಗಳು ತಮಗೆ ಎಲ್ಲಾ ಮಾಹಿತಿ ಹಾಗೂ ಸಹಕಾರ ನಿಡುತ್ತಾರೆ ಅಲ್ಲದೆ ವ್ಯಾಕ್ಸಿನ್ ಹಾಕಿಸುವ ಕೆಲಸದಲಿ ಎಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಗಳು ಕಾರ್ಮೀಕ ಬಂಧುಗಳು ಕೊವಿಡ್ ವಾರಿಯರ್‍ಸ್ ಗಳು ನೆರವಾಗುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದಾರೆ.