ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಿ, ಪ್ರಜಾ ಪ್ರಭುತ್ವವನ್ನು ಗಟ್ಟಿಗೊಳಿಸಿ

ಬೀದರ್ :ಮೇ.4: ಬಸವನಗರ ಕಾಲೋನಿಯಲ್ಲಿ ಮನೆ ಯನ್ನು ನೆಲಸಮಗೊಳಿಸು ವ ಕಾರ್ಮಿಕರು ಅಖಿಲ ಭಾರತ ವಿಶ್ವ ವಿದ್ಯಾಲಯ ಗಳ ನೌಕರರ ಒಕ್ಕೂಟ ದಿಂದ ಕಡ್ಡಾಯವಾದ ಮತದಾನ ಜಾಗೃತಿ ಅಭಿ ಯಾನವನ್ನು ನಡೆಸಲಾ ಗಿತ್ತು. ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯ ರಾದ ವೀರಭದ್ರಪ್ಪ ಉಪ್ಪಿನ ರವರು ಮಾತನಾಡಿ, ಕಾರ್ಮಿಕರು ಹಕ್ಕು ಬಾಧ್ಯತೆ ಗಳ ರಕ್ಷಣೆಯ ಉದ್ದೇಶ ದಿಂದ, ಫ್ರಾನ್ಸಿನ ಪ್ಯಾರಿಸ್ ನಲ್ಲಿ 1.5.1889 ರಂದು ಕಾರ್ಮಿಕರು ದಿನದ ಆರಂಭ ವಾಗಿ, ವಿಶ್ವದಲ್ಲಿ 80 ಕ್ಕಿಂತ ಹೆಚ್ಚು ದೇಶಗಳು ಇದನ್ನು ಆಚರಿಸುತ್ತಿದ್ದು, ಭಾರತದಲ್ಲಿ ತಮಿಳುನಾಡಿನ ಲೇಬರ್ ಕಿಸಾನ್ ಪರ್ಟಿಯು ದಿನಾಂಕ 1.5.1923 ರಂದು ಈ ಆಚರಣೆಯ ಶುಭಾ ರಂಭವನ್ನು ಮಾಡಿತ್ತು ಎಂದು ತಿಳಿಸಿದರು. ಮುಂದುವರೆದು ಮಾತ ನಾಡಿ, 80 ರ್ಷ ಮೇಲ್ಪಟ್ಟ ವಯೋವೃದ್ಧರು, ಅಂಗವಿಕ ಲರಿಗೆ ಮತಗಟ್ಟೆಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ, ಅವರ ಮನೆ ಬಾಗಿಲಿಗೆ ಚುನಾವಣಾ ತಂಡ ಆಗಮಿಸಿ ಮತದಾನ ಮಾಡಿಸುವ ಹಾಗೂ ಮತ ದಾರರಿಗೆ ಅನುಕೂಲ ವಾಗುವಂತಹ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರ ಸದುಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದರು. ಕಾರ್ಮಿಕರು “ಕಡ್ಡಾಯ ವಾಗಿ ಮತದಾನ ಮಾಡು ವೆವು” ಎನ್ನುವ ಸಂಕಲ್ಪ ವನ್ನು ಮಾಡಿಸಿದರು.

ರಾಮಪ್ಪ, ನವಾಬ್, ಮೈನೋದ್ದಿನ್, ಪ್ರಕಾಶ, ಘಾಳೆಪ್ಪ, ಇಸ್ಮಾಯಿಲ್, ಇಬ್ರಾಹೀಂ, ಶಿರೋಮಣಿ, ಮೈಬೂಬಸಾಬ್, ಸಂತೋಷ, ನಾಗರಾಜ್ ಮುಂತಾದವರು ಹಾಜರಿದ್ದರು.