
ಕೋಲಾರ,ಮೇ,೩:ಸಮಾಜದಲ್ಲಿ ಕಾರ್ಮಿಕರು ಇದ್ದರೆ ಮಾತ್ರವೇ ಮಾಲೀಕರು ಉಳಿಯಲು ಸಾಧ್ಯ ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಮಾಲೀಕನು ಕಾರ್ಮಿಕರ ಯೋಗಕ್ಷೇಮ ವಿಚಾರಿಸುವುದು ಆತನ ಜವಾಬ್ದಾರಿ ಎಂದು ಕಟ್ಟಡ ಕಾರ್ಮಿಕರ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ ತಿಳಿಸಿದರು.
ನಗರದ ಮೆಕ್ಕೆ ಸರ್ಕಲ್ ನಲ್ಲಿ ಕಟ್ಟಡ ಕಾರ್ಮಿಕರ ಸಂಘದಿಂದ ಸೋಮವಾರ ನಡೆದ ಮೇ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿ, ಕಾರ್ಮಿಕರನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ಒಂದನ್ನು ಕಾರ್ಮಿಕರ ದಿನವನ್ನಾಗಿ ಘೋಷಿಸಲಾಗಿದೆ ದುಡಿಯುವ ಕೈಗಳು ಮತ್ತು ದುಡಿಸುವವರ ನಡುವಿನ ತಾರತಮ್ಯ ಹಾಗೂ ದುಡಿಯವರ ಜನರು ಶೋಷಣೆಗೊಳಗಾಗುತ್ತಿರುವ ಪರಿಯನ್ನು ಬೆಳಕಿಗೆ ತಂದ ಕಾರ್ಲ್ ಮಾರ್ಕ್ಸ್ ಕಾರ್ಮಿಕರ ಸಂಘಟನೆಗಳ ಪಥವನ್ನು ತೋರಿಸಿಕೊಟ್ಟರು, ಮುಂದೆ ಜಗತ್ತಿನಾದ್ಯಂತ ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡ ಪರಿಣಾಮವಾಗಿ ಕಾರ್ಮಿಕರು ಕೂಡ ತಮ್ಮ ಶ್ರಮಕ್ಕೆ ಸಮನಾದ ಪ್ರತಿಫಲ ಪಡೆದುಕೊಳ್ಳುವಂತಾಗಿದೆ, ಆದರೆ ಇವತ್ತು ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾರ್ಮಿಕರ ಅಭಿವೃದ್ಧಿಗಾಗಿ ಸರಕಾರವೇ ಮುಂದಾಳತ್ವದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ ಇದರಲ್ಲಿ ಹಲವಾರು ಸವಲತ್ತುಗಳನ್ನು ಜಾರಿಗೊಳಿಸಿದೆ ಅವುಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ನಮ್ಮ ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕರಿಗೆ ಮಾರ್ಗದರ್ಶನ ನೋಡಲಾಗಿದೆ ಕಾರ್ಮಿಕ ಸಂಘಟನೆಯು ಇನ್ನಷ್ಟು ಮಾರ್ಗದರ್ಶನ ಪಡೆದುಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರ ಫೆಡರೇಶನ್ ತಾಲೂಕು ಅಧ್ಯಕ್ಷ ಕೊಡಿಯಪ್ಪ, ಮುಖಂಡರಾದ ನಾಗರಾಜ್, ವೆಂಕಟೇಶ್, ಮುರಳಿ, ಅನಿಲ್, ಮುರಳಿ, ಜಯಮ್ಮ, ಶಿವಪ್ಪ ಇದ್ದರು.