ಕಾರ್ಮಿಕರಿಗೆ ಸರಕಾರ 5 ಲಕ್ಷ ಪರಿಹಾರ ಹಣವನ್ನು ನೀಡಬೇಕುಃ ಭೀಮಶಿ ಕಲಾದಗಿ

ವಿಜಯಪುರ, ಮೇ.2-ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷ ಕೆಂಪು ಧ್ವಜಾರೋಹಣ ಮಾಡಿ ವಿಜ್ರಂಭಣೆಯನ್ನು ಕಾರ್ಮಿಕರ ದಿನಾಚರಣಯನ್ನು ಆಚರಿಸಲಾಗುತ್ತಿತ್ತು.
ಕರೋನಾ 1ನೇ ಅಲೆ ಇರುವುದರಿಂದ ಸರಕಾರ 14 ದಿನಗಳ ಕಾಲ ಲಾಕ್‍ಡೌನ್ ಮಾಡಿರುವುದರಿಂದ ಕಾರ್ಮಿಕರ ದಿನಾಚರಣೆಯನ್ನು ನಿಲ್ಲಿಸಲಾಗಿದೆ. ಬಡವರ ಕೂಲಿ ಕಾರ್ಮಿಕರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕರೋನಾದಿಂದ ಅವರಿಗೆ ಹಣವಿಲ್ಲದೆ ಸರಿಯಾದ ಆಕ್ಸಿಜನ್ ಮತ್ತು ಔಷಧಗಳು ಸಿಗಲಾರದೆ ಸಾಯುತ್ತಿದ್ದಾರೆ. ಕೊವಿಡ್‍ದಿಂದ ಮರಣ ಹೊಂದಿದ ಕಾರ್ಮಿಕರಿಗೆ ಸರಕಾರ 5 ಲಕ್ಷ ಪರಿಹಾರ ಹಣವನ್ನು ನೀಡಬೇಕು. ಹಾಗೂ ಉಚಿತವಾಗಿ 10 ಕೆಜಿ. ಅಕ್ಕಿ 3 ಕೆಜಿ ಜೋಳ 2 ಕೆಜಿ ಗೋಧಿ ಕೂಡಲೇ ವಿತರಿಸಬೇಕು. ಗೂಳೆ ಹೋದ ರೈತರಿಗೆ ತಮ್ಮ ಜಿಲ್ಲೆ ಮತ್ತು ಹಳ್ಳಿಗಳಿಗೆ ಹೋಗಲು ಸರಿಯಾದ ವ್ಯವಸ್ಥೆ ಮಾಡಬೇಕು. ಕೇಂದ್ರ ಸರಕಾರದ ಬೆಲೆ ಏರಿಕೆಯಿಂದ ತತ್ತರಿಸಿದ ಕಾರ್ಮಿಕರಿಗೆ 21 ಸಾವಿರ ವೇತನ ನೀಡಬೇಕು. ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ವರ್ಗಾವಣೆ ಮಾಡಿದ್ದನ್ನು ರದ್ದು ಪಡಿಸಿ 6ನೇ ವೇತನ ಜಾರಿ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಆಗ್ರಹಿಸಿದ್ದಾರೆ.