ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು. ಮೇ.01: ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಜೈಭೀಮ್ ಜನಸ್ಪಂದನ ವೇದಿಕೆ ವತಿಯಿಂದ ಗಾಂಧಿನಗರದ ಅಣ್ಣಮ್ಮ ದೇವಸ್ಥಾನದ ರಸ್ತೆಯಲ್ಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಭಿತ್ತಿಪತ್ರ ಹಿಡಿದು ಪ್ರತಿಭಟಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೈಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷರಾದ ಚೇತನ್ ಕಾಂತರಾಜು ಸರ್ಕಾರ ಕಾರ್ಮಿಕರ ಪರವಾದ ನಿಲುವನ್ನು ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಈ ಕೂಡಲೇ ಪ್ರಕಟಿಸಬೇಕು .
ಇಲ್ಲಿಯವರೆಗೂ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಕಾಲದಲ್ಲಿ ಆರ್ಥಿಕ ನೆರವು ಸಿಕ್ಕಂತಾಗುತ್ತದೆ ಎಂದು ಆಗ್ರಹಿಸಿದರು .ಕಳೆದ 1ವರ್ಷದಿಂದ ಮಹಾಮಾರಿ ಕೂರೂನಾ ವ್ಯತಿರಿಕ್ತವಾದ ಪರಿಣಾಮದಿಂದ ಕೆಲಸವೂ ಇಲ್ಲದಂತಾಗಿದೆ .ಸರ್ಕಾರ ನೋಂದಾಯಿತ ಕಾರ್ಮಿಕರಿಗೆ ಆರ್ಥಿಕ ಸಹಾಯ ಘೋಷಿಸಿದೆ 1 ವರ್ಷವಾದರೂ ಸಹಾಯಧನ ಹಾಗೂ ಪೂರ್ಣ ಪ್ರಮಾಣದ ನೆರವಿಗೆ ಬಂದಿಲ್ಲ .ಕಳೆದ 5ವರ್ಷಗಳಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ .ಕಳೆದ 4ವರ್ಷದಿಂದ ಕಾರ್ಮಿಕರ ಚಿಕಿತ್ಸೆಗೆ ಸಹಾಯಧನ ಬರದೇ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ .ಕಾರ್ಮಿಕ ದಿನಾಚರಣೆ ವಾದ ಇಂದು ಕಾರ್ಮಿಕರ ಸಂಕಷ್ಟದ ದಿನ ವನ್ನಾಗಿ ಆಚರಿಸುವಂತಾಗಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯು ಪ್ರತಿ ಕಾರ್ಮಿಕರಿಗೆ ಕಳೆದ ವರ್ಷದ ಮಹಾಮಾರಿ ಕೂರೂನಾ ಸಂದರ್ಭದಲ್ಲಿ ಆರ್ಥಿಕ ಸಹಾಯ ಧನವನ್ನು ನೀಡಬೇಕು ಎಂದು ಆಗ್ರಹಿಸಿದರು ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿದೆ.
ಸರ್ಕಾರ ವಲಸಿಗರಿಗೆ, ಕಾರ್ಮಿಕರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು 14 ದಿನಗಳ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ 10 ಕೆ.ಜಿ ಆಹಾರ ಧಾನ್ಯ ಹಾಗೂ 10 ಸಾವಿರ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಸರ್ಕಾರ ಯಾವುದೇ ನೆರವು ಘೋಷಣೆ ಮಾಡಿಲ್ಲ. ಇವತ್ತಿನವರೆಗೂ ಕೇಂದ್ರ ಆಗಲಿ, ರಾಜ್ಯ ಸರ್ಕಾರ ಆಗಲಿ ಯಾವುದೇ ಆರ್ಥಿಕ ಸಹಾಯ ಘೋಷಣೆ ಮಾಡಿಲ್ಲ ಈ ಕೂಡಲೇ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು .
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶೇಖರ್, ಪ್ರಧಾನ ಕಾರ್ಯದರ್ಶಿಯಾದ ಪ್ರಕಾಶ್, ಸಹಕಾರ್ಯದರ್ಶಿ ಶ್ರೀಕಾಂತ್, ಆನಂದ್, ಪ್ರಜ್ವಲ್, ಪ್ರವೀಣ್, ದರ್ಶನ್,ಭಾಸ್ಕರ್, ನಯಾಸ್ ಉಪಸ್ಥಿತರಿದ್ದರು.