ಕಾರ್ಮಿಕರಿಗೆ ಕಿಟ್ ನೀಡದೇ ವಂಚನೆ, ಕ್ರಮಕ್ಕೆ ಒತ್ತಾಯ

ಭಾಲ್ಕಿ:ಮಾ.6: ಕೂಲಿ ಕಾರ್ಮಿಕರಿಗೆ ಸರಕಾರದ ಕಿಟ್ ನೀಡದೇ ವಂಚಿಸಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು, ಕಾರ್ಮಿಕರು ಒತ್ತಾಯಿಸಿದ್ದಾರೆ. ಈ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ಶನಿವಾರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುಮಾರು ದಿನಗಳಿಂದ ಬಡ ಕೂಲಿ ಕಾರ್ಮಿಕರಿಗೆ ಕಿಟ್ ನೀಡುತ್ತಿಲ್ಲ. ಅಧಿಕಾರಿಗಳು ಕಾರ್ಮಿಕರಿಗೆ ಶನಿವಾರ ಮಧ್ಯಾಹ್ನ ಕಿಟ್ ನೀಡುವುದಾಗಿ ಹೇಳಿ ಟೋಕನ್ ನೀಡಿದ್ದಾರೆ.
ಕಿಟ್ ಪಡೆಯಲು ಕಾರ್ಮಿಕರು ಹೋದ ಸಂದರ್ಭದಲ್ಲಿ ಅಧಿಕಾರಿಗಳು ಕಚೇರಿಗೆ ಬೀಗ ಹಾಕಿದ್ದಾರೆ. ಮೊಬೈಲ್ ಕರೆ ಮಾಡಿದರೂ ಅಧಿಕಾರಿಗಳು ಸ್ವೀಕರಿಸಿಲ್ಲ. ಇದರಿಂದ ಕಾರ್ಮಿಕರು ಆಕ್ರೋಗೊಂಡು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಜೈರಾಜ ಕೊಳ್ಳಾ, ಕೀರ್ತಿರತನ ಸೋನಾಳೆ, ದೀಪಕ ಶಿಂಧೆ, ವಿಜಯ ಕಾಸಲೆ, ಅಜಯ ರೆಡ್ಡಿ ಸೇರಿದಂತೆ ಮುಂತಾದವರು ಇದ್ದರು.