ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಹುಬ್ಬಳ್ಳಿ,ಏ5: ಮಹಿಳಾ ಸಬಲೀಕರಣ, ಬಡವರಿಗೆ ಮನೆ ನಿರ್ಮಾಣ, ನಿರ್ಗತಿಕರಿಗೆ ಔಷಧ ವಿತರಣೆ, ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ಮತ್ತಿತರ ಸಮಾಜಿಕ ಕಾರ್ಯಗಳ ಬಗ್ಗೆ ಮಲಬಾರ ಚಾರಿಟೇಬಲ್ ಟ್ರಸ್ಟ ವಿಶೇಷ ಕಾಳಜಿಯನ್ನು ಹೊಂದಿದೆ ಎಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸನ ಶಾಖಾ ಮುಖ್ಯಸ್ಥರಾದ ಶಶಾಂಕ ಏಕಬೋಟೆ ಹೇಳಿದರು.
ಅವರು ಹಳೇಹುಬ್ಬಳ್ಳಿಯಲ್ಲಿರುವ ಎ ಜೆ ಮುಧೋಳ ಭವನದಲ್ಲಿ ಏರ್ಪಡಿಸಿದ್ದ ಬೀಡಿ ಕಾರ್ಮಿಕರು, ಕೂಲಿ ಕಾರ್ಮಿಕರು, ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಮಲಬಾರ್ ಚಾರಿಟೇಬಲ್ ಟ್ರಸ್ಟನ ಪ್ರಮುಖ ಸಾಮಾಜಿಕ ಕಾರ್ಯಗಳ ಜೊತೆ ಸದೃಢ ಸಮಾಜದ ನಿರ್ಮಾಣವೇ ಟ್ರಸ್ಟಿನ ಮುಖ್ಯ ಉದ್ದೇಶ ಎಂದರು. ಕಾರ್ಮಿಕ ಮುಖಂಡ ಬಾಬಾಜಾನ ಮುಧೋಳ ಮಾತನಾಡಿ ವಿವಿದ ಸಾಮಾಜಿಕ ಕ್ಷೇತ್ರಗಳಲ್ಲಿ ಮಲಬಾರ ಟ್ರಸ್ಟ ನವರು ಸಾಮಾಜಿಕವಾಗಿ ಶೈಕ್ಷಣೀಕವಾಗಿ ಆರ್ಥಿಕವಾಗಿ ಹಿಂದುಳಿದ ಬಡವರ ಶ್ರೇಯೋಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ ಶ್ರಮಿಸುತ್ತೀರುವುದು ಶ್ಲ್ಯಾಘನೀಯವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಿಲ್ಲಿ ಎಂಪ್ಲಾಯಿಜ್ ಕಲ್ಚರಲ್ ಅಸೋಶಿಯೇಷನ್ ಜಿಲ್ಲಾ ಅಧ್ಯಕ್ಷರಾದ ನಜೀರಅಹ್ಮದ ಕೋಲಕಾರ, ಬಿ ಎ ಮುಧೋ¼,. ಶಿರಾಜಅಹ್ಮದ ಮುಲ್ಲಾ, ಶಿವಕುಮಾರ ಹಿರೇಮಠ, ಕಿರ್ತೀರಾಜ ಶೆಟ್ಟಿ. ಬಾನು ಮುಜಾವರ್, ಗೀತಾ ಕಟಗಿ, ರಮೇಶ ಬೋಸ್ಲೆ, ಶಾಜೀದ ಹಾಲಬಾವಿ, ಪ್ಯಾರಿಜಾನ್, ಮಹಬೂಬ ಧಾರವಾಡ. ಎ ಎಸ್ ಪೀರಜಾದೆ, ಜಾಫರ, ಮತ್ತಿತರು ಪಾಲ್ಗೂಂಡಿದ್ದರು.