ಕಾರ್ಮಿಕರನ್ನು ಹೊತ್ತೊಯುತ್ತಿದ ಟೆಂಪೋ ಪಲ್ಟಿ: ಓರ್ವ ಸಾವು, 7 ಜನರಿಗೆ ಗಾಯ

ಕಲಬುರಗಿ,ಜೂ.9-ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಸಮೀಪ ಚಲಿಸುತ್ತಿದ್ದ ಟೆಂಪೆÇೀ ಉರುಳಿ ಓರ್ವ ಕಟ್ಟಡ ಕಾರ್ಮಿಕರ ಸ್ಥಳದಲ್ಲೇ ಮೃತಪಟ್ಟಿದ್ದು, 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಇಂದು ಬೆಳಿಗ್ಗೆ 9 ಗಂಟೆಗೆ ನಡೆದಿದೆ
ಹರಕಂಚಿ ಗ್ರಾಮದಲ್ಲಿ ನಿವಾಸಿ ಶಿವಪ್ಪ ಹರಕಂಚಿ (34) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ನಾಗೂರ ಗ್ರಾಮದಿಂದ ಹುಮನಾಬಾದ್‍ಗೆ ತೆರಳುತ್ತಿದ್ದರು. ಮಾರ್ಗ ಮಧ್ಯದ ಡೊಂಗರಗಾಂವ ಕ್ರಾಸ್ ಸಮೀಪ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೆÇೀ ವಾಹನದ ಮುಂದಿನ ಗಾಲಿ ಕಳಚಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಮಲಾಪುರ ಪಿಎಸ್‍ಐ ಚಂದಾನಂದ ಸೌದಿ ಸೇರಿದಂತೆ ಪೆÇಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.