ಕಾರ್ಮಿಕರನ್ನು ಪುನ ಕೆಲಸಕ್ಕೆ ನೇಮಿಸಿಕೊಳ್ಳಲು ಆಗ್ರಹ

ರಾಯಚೂರು, ಮಾ.೩೧- ಜಿಲ್ಲೆಯ ಮಾನವಿ,ಸಿರವಾರ ಹಾಗೂ ಲಿಂಗಸೂಗೂರು ತಾಲೂಕುಗಳಲ್ಲಿ ಗಮೇಸ್ ವಿಂಡ್‌ಟರ್ಬನ್ ಹೆಸರಿನ ಗಾಳಿಯಂತ್ರಗಳ ಮೂಲಕ ಹಾಗೂ ಸೂರ್ಯನ ಬೆಳಕಿನ ಮೂಲಕ ವಿದ್ಯುತ್ ಉತ್ಪಾದಿಸುವ ಕಂಪನಿಯಲ್ಲಿ ೨೦ ಜನ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದ್ದು, ಸದರಿ ಕಾರ್ಮಿಕರನ್ನು ಪುನ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ ಹಾಗೂ ಅಖಿಲ ಭಾರತ ವಿದ್ಯುತ್ ನೌಕರರ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
೨೦೧೫ ರಿಂದ ೨೦೧೭ ರ ವರೆಗೆ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಯಾವುದೇ ಸೌಲಭ್ಯಗಳನ್ನು ನೀಡದೆ ಕೆಲಸದ ಅವಧಿ ೮ ಗಂಟೆ ಬದಲಾಗಿ ೧೨ ಗಂಟೆ ದುಡಿಸಿಕೊಂಡಿದ್ದಾರೆ ಎಂದು ದೂರಿದರು.
ಸಹಾಯಕ ಕಾರ್ಮಿಕ ಆಯುಕ್ತರು ಕಾನೂನುಬಾಹಿರವಾಗಿ ವಜಾಗೊಳಿಸಿದ ಕಾರ್ಮಿಕರನ್ನು ಪುನ ಕೆಲಸಕ್ಕೆ ನೇಮಿಸಿಕೊಳ್ಳಬೇಕು.೮ ಗಂಟೆ ಮಾತ್ರ ಕೆಲಸ ಮಾಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಹೆಚ್ಚುವರಿ ಕೆಲಸ ಮಾಡಿಸಿಕೊಂಡರೆ ಹೆಚ್ಚುವರಿ ವೇತನ ನೀಡಬೇಕು. ಮುಂದೆ ಕಾರ್ಮಿಕರಿಗೆ ನೀಡಬೇಕಾದ ಎಲ್ಲಾ ಕಾನೂನುಬದ್ಧ ಸೌಲಭ್ಯಗಳನ್ನು ನೀಡಬೇಕೆಂದು ಆದೇಶಿಸಿದರು ಇದಕ್ಕೆ ಮಾಲೀಕರ ಪರ ಪ್ರತಿನಿಧಿಗಳು , ಗುತ್ತೇದಾರ ಪ್ರತಿನಿಧಿಗಳು ಹಾಗೂ ಕಾರ್ಮಿಕರು ಒಪ್ಪಿ ಒಪ್ಪಂದಕ್ಕೆ ಸಹಿ ಹಾಕಲಾಯಿತು . ಆದರೆ ಮಾಲೀಕರು ಮತ್ತು ಗುತ್ತೇದಾರರು ವಜಾ ಮಾಡಿದ ಕಾರ್ಮಿಕರನ್ನು ಪುನ ಕೆಲಸಕ್ಕೆ ನೇಮಿಸಿಕೊಂಡು ೮ ಗಂಟೆ ಕೆಲಸ ಮಾಡಿಸಿಕೊಂಡು ಹೆಚ್ಚುವರಿ ಕೆಲಸದ ವೇತನ ನೀಡುತ್ತಿದ್ದಾರೆ.ಆದರೆ ಉಳಿದ ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
೨೦೧೫ ರಿಂದ ಬಾಕಿಯಿರುವ ಅರಿಯರ್ಸ್ ಹಾಗೂ ಬೋನಸ್ ಮತ್ತು ಇತರೆ ಕಡಿತಗೊಳಿಸಿದ ಹಣ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸತ್ಯಬಾಬು, ಡಿ.ಎಸ್,ಶರಣಬಸವ,ಸೇರಿದಂತೆ ಇತರರು ಇದ್ದರು.