ಕಾರ್ನ್ ಚೀಸ್ ಬಾಲ್ಸ್

ಬೇಕಾಗುವ ಸಾಮಗ್ರಿಗಳು

*ಸಿಹಿ ಜೋಳ – ೧ ಕಪ್
*ಮೈದಾ ಹಿಟ್ಟು – ೨ ಚಮಚ
*ಕಾರ್ನ್ ಫ್ಲೋರ್ – ೨ ಚಮಚ
*ಬೇಕಿಂಗ್ ಸೋಡ – ೧/೪ ಚಮಚ
*ಕಾಳು ಮೆಣಸು – ೧ ಚಮಚ
*ಚೀಸ್ – ೧ ಚಮಚ
*ಅಚ್ಚಖಾರದ ಪುಡಿ -೧ ಚಮಚ
*ಕೊತ್ತಂಬರಿ ಸೊಪ್ಪು –
*ನಿಂಬೆಹಣ್ಣು – ೧/೨
*ಶುಂಠಿ –
*ಜೀರಿಗೆ ಪುಡಿ – ೧ ಚಮಚ
*ಉಪ್ಪು – ೧ ಚಮಚ
*ಎಣ್ಣೆ -೧೦೦ ಗ್ರಾಂ
*ನೀರು-

ಮಾಡುವ ವಿಧಾನ :

ಸಿಹಿಜೋಳವನ್ನು ಬೌಲ್‌ಗೆ ಹಾಕಿಕೊಳ್ಳಿ, ಇದಕ್ಕೆ ಮೈದಾಹಿಟ್ಟು, ಕಾರ್ನ್ ಫ್ಲೋರ್, ಬೇಕಿಂಗ್ ಸೋಡ, ಕಾಳು ಮೆಣಸು, ತುರಿದ ಶುಂಠಿ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ತುರಿದ ಚೀಸ್, ಲಿಂಬೆರಸ, ಉಪ್ಪು ಎಲ್ಲವನ್ನೂ ಹಾಕಿ. ಚೆನ್ನಾಗಿ ಕಲಸಿಕೊಂಡು ಉಂಡೆಯಂತೆ ಮಾಡಿಕೊಳ್ಳಿ. ಇದನ್ನು ಕಾದ ಎಣ್ಣೆಗೆ ಹಾಕಿ ಕರಿಯಿರಿ. ಈಗ ಕಾರ್ನ್ ಚೀಸ್ ಬಾಲ್ಸ್ ತಿನ್ನಲು ರೆಡಿ.