ಕಾರ್ನಾಡ್ ಕೃತಿಗೆ ಸಂಚಾರಿ ವಿಜಯ್ ಧ್ವನಿ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್,ಕೊರೊನಾ ಸೋಂಕಿನ ಸಮಯದಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ನಡುವೆ ಸದ್ದಿಲ್ಲದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಆತ್ಮಚರಿತ್ರೆ “ಆಡಾಡುತಾ ಆಯಷ್ಯಾ” ಧ್ವನಿ ನೀಡಿ ಗಮನ ಸೆಳೆದಿದ್ದಾರೆ. ಇನ್ನು ಮುಂದೆ ಆತ್ಮಚರಿತ್ರೆ ಆಡಿಯೋ ರೂಪದಲ್ಲಿ ಸಿಗಲಿದೆ.

350 ಪುಟಗಳ ಪುಸ್ತಕವನ್ನು ಓದುವಾಗ ಹಲವಾರು ಸವಾಲನ್ನು ಮೆಟ್ಟಿ ನಿಂತು ಆತ್ಮಚರಿತ್ರೆ ಓದಿದ್ದಾರೆ. ಅದಕ್ಕೆ ಕಾರಣ ಒಂದೆಡೆ ಉತ್ತರ ಕನ್ನಡ ಭಾಷೆ, ಮತ್ತೊಂಡೆ ಬೆಂಗಳೂರು, ಇನ್ನೊಮ್ಮೆ ಮರಾಠಿ ಮಿಶ್ರಿತ ಕನ್ನಡ ಹೀಗೆ ಅನೇಕ ಹೊಸ ಹೊಸ ಪದಗಳನ್ನು ಪುಸ್ತಕ ಪರಿಚಯ ಮಾಡಿದೆ.

ಸರಿ ಸುಮಾರು 20 ರಿಂದ 25 ದಿನ ಪುಸ್ತಕ ಓದಲು ಸಮಯ ತೆಗೆದುಕೊಂಡಿದ್ದೇನೆ. ಮನೆಯಲ್ಲಿ ಎರಡೆರಡು ಬಾರಿ ಓದಿ ಸ್ಟುಡಿಯೋಗೆ ಹೋದ ಮೇಲೂ ಅದನ್ನು ಓದಿದ್ದೇನೆ. ಒಂದು ರೀತಿ ಹೊಸ ಪ್ರಯತ್ನ ಎಂದು ನಟ ಸಂಚಾರಿ ವಿಜಯ್ ಅನುಭವ ಹಂಚಿಕೊಂಡಿದ್ದಾರೆ.

ಕರ್ನಾಡ್ ಅವರ ಬಾಲ್ಯದಲ್ಲಿ ಮಹಾರಾಷ್ಟ್ರದಿಂದ ಧಾರವಾಡ,ಸಾರಸ್ವತಪುರದಲ್ಲಿ ನಿಂತು ಅಲ್ಲಿಂದ ಶಿರಸಿ, ತಾಯಿ ‘ಕುಟ್ಟಾಬಾಯಿಯ’ ಜೀವನದ ಏಳು ಬೀಳುಗಳ ಅನಾವರಣ, ಗಂಡನನ್ನು ಕಳೆದುಕೊಂಡು 11ವರ್ಷದ ಬಾಲಚಂದ್ರ ಎನ್ನುವ ಮಗನನ್ನು ಕಟ್ಟಿಕೊಂಡು ಆಕೆ ಧೈರ್ಯದಿಂದ ಸಮಾಜ ಎದುರಿಸಿದ ಪ್ರಯಾಣ ಒಳಗೊಂಡಿದೆ.

ಚಿಕ್ಕ ವಯಸ್ಸಿಗೆ ಇಂಗ್ಲೆಂಡ್‍ನಲ್ಲಿ ವಿದ್ಯಾಭ್ಯಾಸ,ನಂತರ ಓಈಂಗೆ ನಿದೇಶಕನಾಗಿದ್ದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳು ಬಾಲಿವುಡ್‍ನಲ್ಲಿ ಸ್ಟಾರ್‍ಗಳಾಗಿ ಮಿಂಚಿದ್ದು. ತಮ್ಮ ಕೆಲವು ನಿಲುವುಗಳಿಂದ ಅನೇಕಾನೇಕ ಬಲವುಳ್ಳವರನ್ನು ಎದುರು ಹಾಕಿಕೊಂಡಿಡ್ಡ ಘಟನೆ ಬಿಚ್ಚಿಟ್ಟಿದ್ದಾರೆ ಹೊಸ ಅನುಭವ ಎಂದಿದ್ದಾರೆ

ಮದ್ರಾಸಿಗೆ ಕೆಲಸ ಅರಸಿ ಹೋಗಿದ್ದು ಅಲ್ಲಿಂದ ಕನ್ನಡ ಸಾಹಿತ್ಯ, ನಾಟಕ, ಸಿನಿಮಾ ಹೇಗೆ ಹತ್ತು ಹಲವಾರು ಕ್ಷೇತ್ರಗಳಿಗೆ ತೆರೆದುಕೊಂಡಿದ್ದು, ಒಂದು ರೋಮಾಂಚನ ಪ್ರಯಾಣ ಅನ್ನಿಸಿದ್ದು ಸುಳ್ಳಲ್ಲ ಎಂದು ಅನುಭವ ಹಂಚಿಕೊಂಡಿದ್ದಾರೆ