ಕಾರ್ತೀಕ 2ನೇ ಸೋಮವಾರ ; ಶ್ರೀದೊಡ್ಡಬಸವೇಶ್ವರದೇವಸ್ಥಾನದಲ್ಲಿ ಅನ್ನದಾಸೋಹ


ಸಂಜೆವಾಣಿ ವಾರ್ತೆ
ಕುರುಗೋಡು.ನ.8: ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಳ್ಳಾರಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸಿದ್ದರಾಮೇಶ್ವರ ಎಂ.ಸಿರವಾರ ಹೇಳಿದರು.
ಅವರು ಸೋಮವಾರ ಪಟ್ಟಣದ ಆರಾಧ್ಯದೈವ ಶ್ರೀದೊಡ್ಡಬಸವೇಸ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತೀಕಮಾಸದ 2ನೇ ಸೋಮವಾರ ಪ್ರಯುಕ್ತ ದೇವಸ್ಥಾನದಿಂದ ಭಕ್ತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದ ಅವರು, ಶ್ರೀದೊಡ್ಡಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅನ್ನದಾಸೋಹ ಕಾರ್ಯಕ್ರಮವು ಸಹಸ್ರಾರು ಸಂಖ್ಯೆಯ ಭಕ್ತರಿಗೆ ಹಾಗು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಆದ್ದರಿಂದ ಭಕ್ತರು ದಾಸೋಹ ಕಾರ್ಯಕ್ರಮದಲ್ಲಿ ಭಕ್ತರು ಅನ್ನವನ್ನು ಚೆಲ್ಲದೆ, ಮತ್ತು ವೇಸ್ಟ್ ಮಾಡದೇ ಸಕ್ರಿಯವಾಗಿ ಸೇವಿಸಬೇಕೆಂದು ನೆರೆದ ಭಕ್ತರಿಗೆ ಸಲಹೆ ನೀಡಿದರು. 
ಪ್ರಾರಂಭದಲ್ಲಿ ಕಾರ್ತೀಕಮಾಸ ಪ್ರಯುಕ್ತ ದೇವಸ್ಥಾನದ ವತಿಯಿಂದ ಶ್ರೀದೊಡ್ಡಬಸವೇಸ್ವರಸ್ವಾಮಿಯ ಮೂರ್ತಿಗೆ ಬಗೆ-ಬಗೆಯ ಹೂಗಳಿಂದ ಶೃಂಗಾರಗೊಳಿಸಿ, ರುದ್ರಾಭಿಷೇಕ, ಎಲೆಪೂಜೆ ನೆರವೇರಿಸಿ, ವಿವಿದ ಕಾರ್ಯಕ್ರಮಗಳು ಧಾರ್ಮಿಕ ವಿದಿ-ವಿಧಾನಗಳಿಂದ ಸಾಂಗೋಪವಾಗಿ ಜರುಗಿದವು. ಕಾರ್ತಿಕಮಾಸದ ಪ್ರಯುಕ್ತ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಕುರುಗೋಡು ಶ್ರೀದೊಡ್ಡಬಸವೇಶ್ವರಸ್ವಾಮಿ ದರ್ಶನಕ್ಕೆ ಸಾಲು-ಸಾಲಾಗಿ ನಿಂತು ದರ್ಶನಪಡೆದು, ಹೂಹಣ್ಣು, ಕಾಯಿಗಳನ್ನು ಸಮರ್ಪಿಸಿ ಶ್ರೀಸ್ವಾಮಿ ಕೃಪೆಗೆ ಪಾತ್ರರಾದರು.
ಕೆಲ ಭಕ್ತರು ತಮ್ಮ-ತಮ್ಮ ಹರಿಕೆ ಪ್ರಕಾರವಾಗಿ ಕುಟುಂಬಸಮೇತರಾಗಿ ಆಗಮಿಸಿ ಶ್ರೀದೊಡ್ಡಬಸವೇಶ್ವರಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ ನೆರೆದ ಭಕ್ತರಿಗೆ ಅನ್ನಸಂತರ್ಪಣೆ ಮಾಡಿ ಹಣತೆಯಲ್ಲಿ ಎಣ್ಣೆಹಾಕಿ ದೀಪಹಚ್ಚಿ ಭಕ್ತಿಮೆರೆದರು. ಶ್ರೀದೊಡ್ಡಬಸವೇಶ್ವರ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಬಿ.ಚಂದ್ರಪ್ಪಕೊಟ್ಟರು, ಎಸ್ಡಿಎಂ. ಸದಾಶಿವಯ್ಯಸ್ವಾಮಿ, ಚಾನಾಳುಆನಂದ, ಪ್ರಶಾಂತ, ಪ್ರಭುಸ್ವಾಮಿ, ದೇವಸ್ಥಾನದ ಅರ್ಚಕರು, ಸೇರಿದಂತೆ  ಅಪಾರ ಸಂಖ್ಯೆಯ ಭಕ್ತರು ಇದ್ದರು