ಕಾರ್ತೀಕಮಾಸ ; ಅನ್ನಪೂರ್ಣೇಶ್ವರಿಕ್ಯಾಂಪ್‍ನಲ್ಲಿ ವನಭೋಜನ


ಸಂಜೆವಾಣಿ ವಾರ್ತೆ
ಕುರುಗೋಡು ನ.22  ಸಮೀಪದ ಅನ್ನಪೂರ್ಣೇಶ್ವರಿಕಾಂಪು ಗ್ರಾಮದಲ್ಲಿ ಕಾರ್ತೀಕಮಾಸ ಪ್ರಯುಕ್ತ ಶ್ರೀರಾಮದೇವ ದೇವಸ್ಥಾನದಲ್ಲಿರುವ ಶ್ರೀಸುಬ್ರಮಣ್ಯಸ್ವಾಮಿಯವರಿಗೆ ಅಭಿಷೇಕ ಮಾಡುವುದರೊಂದಿಗೆ ಕ್ಯಾಂಪಿನ ಸಹಸ್ರಾರು ಭಕ್ತರ ಸಮೂಹದೊಂದಿಗೆ ಸಂಬ್ರಮ- ಸಡಗರದಿಂದ ವನಭೋಜನ ಕಾರ್ಯಕ್ರಮವನ್ನು ಜರುಗಿಸಿದರು.
ಪ್ರಾರಂಭದಲ್ಲಿ ದೇವಸ್ಥಾನದ ಪೂಜಾರಿ ಮಂಜಪ್ಪನವರು ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಸೇರಿದಂತೆ ಇತರೆ ದಾರ್ಮಿಕ ಕಾರ್ಯಕ್ರಮಗಳನ್ನು ಸಾಂಗೋಪವಾಗಿ ಜರುಗಿಸಿದರು. ಪೂಜೆ ನಂತರ ಕ್ಯಾಂಪಿನ ಜನರು ಎಲ್ಲರೂ ಸಮೂಹಿಕವಾಗಿ ವಿವಿದ ಸುಚಿ-ರುಚಿಯಾದ ವನಭೋಜನ ಸವಿದು ದೇವರ ಕೃಪೆಗೆ ಪಾತ್ರರಾದರು.
ವನಭೋಜನ ಕಾರ್ಯಕ್ರಮದಲ್ಲಿ ಅನ್ನಪೂರ್ಣಶ್ವರಿಕ್ಯಾಂಪಿ ಮುಖಂಡ ಎನ್.ಸತ್ಯಪ್ರಸಾದ್,  ವಿ.ಲಕ್ಷಿರೆಡ್ಡಿ, ವೆಂಕಟರೆಡ್ಡಿ,  ಶಿವರುದ್ರಗೌಡ, ಎಂ.ಲಕ್ಷಿರೆಡ್ಡಿ,  ಭೀಮನಗೌಡ, ವಿಷ್ಣುವರ್ದನರೆಡ್ಡಿ, ವೇಣುಗೋಪಾಲರಾವ್, ವಿ.ಉಮೇಶ, ನಿರ್ಮಲರಾವ್, ಜಿ.ಶಾಂಭರೆಡ್ಡಿ, ಎನ್.ರವಿ, ಸತೀಷ್, ಹರೀಶ್‍ರೆಡ್ಡಿ, ಗಂಗಾಧರ, ಎನ್.ಪುಷ್ಪ, ಪಾರ್ವತಿ, ಎಂ.ವಿರುಪಾಕ್ಷಿಗೌಡ ಸೇರಿದಂತೆ ಇತರೆ ಊರಿನ ಮುಖಂಡರು, ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.