ಕಾರ್ತಿ ಚಿದಂಬರಂ ನಿವಾಸದ ಮೇಲೆ ಸಿಬಿಐ ದಾಳಿ

ಚೆನ್ನೈ, ಜು.9- ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ ನೀಡಿರುವ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ಕಾರ್ತಿ ಚಿದಂಬರಂ ಮನೆ ಮೇಲೆ ಸಿಬಿಐ ಮತ್ತೆ ದಾಳಿ ನಡೆಸಿದೆ.
ಈ ಹಿಂದೆ ಮೇ 17ರಂದು ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಹಾಗೂ ಕಚೇರಿ ಸೇರಿ 9 ಸ್ಥಳಗಳಲ್ಲಿ ಸಿಬಿಐ ದಾಳಿ ಮಾಡಿತ್ತು.
ಚೆನ್ನೈನ ನುಂಗಂಬಾಕ್ಕಂನ ಪೈಕ್ರಾಫ್ಟ್ಸ್ ರಸ್ತೆಯಲ್ಲಿರುವ ಕಾರ್ತಿ ಚಿದಂಬರಂ ಅವರ ಮನೆ ಕೀಲಿ ನಾಪತ್ತೆಯಾಗಿ ದ್ದರಿಂದ ಸಿಬಿಐ ಅಧಿಕಾರಿಗಳು ಅದನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಸಿಬಿಐ ತಂಡ ಲಂಡನ್‌ನಲ್ಲಿರುವ ಕಾರ್ತಿ ಚಿದಂಬರಂ ಅವರಿಂದ ಕೀ ಪಡೆದು ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.