ಕಾರ್ತಿಕ ಮಾಸ ಸಮೃದ್ಧಿ ಸಂಕೇತ ಶ್ರೀಬೂದಿಬಸವ ಶಿವಾಚಾರ್ಯ ಅಭಿಮತ

ದೆವದುರ್ಗ.ನ.೧೦-ಬದುಕಿನ ಕತ್ತಲು ಕಳೆದು ಬೆಳಕು ನೀಡುವುದು ಹಾಗೂ ಕತ್ತಲಿನಿಂದ ಬೆಳಕಿನೆಡೆ ಸಾಗುವುದು ಸಮೃದ್ಧಿ. ದೀಪಾವಳಿ ಬಳಿಕ ಬರುವ ಕಾರ್ತಿಕ ಮಾಸ ಸಮೃದ್ಧಿ ಸಂಕೇತ ಎಂದು ಗಬ್ಬೂರು ಶ್ರೀಮಠದ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗಬ್ಬೂರಿನ ಶ್ರೀಬೂದಿಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ತಿಕ ಮಾಸದ ಸಮಸ್ರ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಚ್ಚೆಗೆ ಮಾತನಾಡಿದರು. ಈ ಮಾಸದಲ್ಲಿ ಭಕ್ತರಲ್ಲಿ ಭಕ್ತಿ ಹೆಚ್ಚುವ ಜತೆಗೆ ಸನ್ಮಾರ್ಗದಲ್ಲಿ ನಡೆಯುವ ಶಕ್ತಿ ಸಿಗಲಿದೆ. ಭಕ್ತರ ಮನದ ಭಾವನೆಗಳು ಈಡೇರಲಿವೆ. ದೀಪದ ಬೆಳಕಿನಂತೆ ಪ್ರತಿಯೊಬ್ಬರ ಜೀವನ ಪ್ರಜ್ವಲಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಕ್ತರಾದ ಸಿದ್ದನಗೌಡ ಮಲ್ಲಾಪುರ, ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಸಿದ್ದರೆಡ್ಡಿ ನೀಲಗಲ್, ಪಂಪನಗೌಡ ಯರಮರಸ್, ರಾಜುಗೌಡ ಯರಮರಸ್, ದೇವರಾಜ, ಶಿವಕುಮಾರ ಎಲಿ, ಸುನೀಲ್ ಸಾಹುಕಾರ, ಬೂದೆಪ್ಪ ಹೂಗಾರ್, ಶಿವಕುಮಾರ ಇತರರಿದ್ದರು.