ಕಾರ್ತಿಕ ಮಾಸ ಪ್ರಯುಕ್ತ ಆಂಜನೇಯ್ಯ ದೇವಸ್ಥಾನದಲ್ಲಿ ದೀಪೋತ್ಸವ

ಸಿರವಾರ.ನ೩೦- ಹಿಂದು ಧರ್ಮದಲ್ಲಿ ಶ್ರಾವಣ ಮಾಸದಂತೆ ಕಾರ್ತಿಕ ಮಾಸವು ಪವಿತ್ರ ಮಾಸವಾಗಿದ್ದೂ, ಈ ಸಂದರ್ಭದಲ್ಲಿ ದೀಪೋತ್ಸವ ಮಾಡುವದರಿಂದ ದುಷ್ಟಶಕ್ತಿಗಳು ದೂರ ಹೋಗಿ ಸಕಲರಿಗೆ ಒಳೇಯದು ಆಗುತ್ತದೆ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪನಾಯಕ ಹೇಳಿದರು.
ಪಟ್ಟಣದ ಅಂಚೇಕಛೇರಿ ಮುಂಭಾಗದಲ್ಲಿರುವ ಆಂಜನೇಯ್ಯ ದೇವಸ್ಥಾನದಲ್ಲಿ ಶನಿವಾರ ಸಂಜೆ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು. ಅನಿರಿಕ್ಷತವಾಗಿ ಕುಟುಂಬ ಸಮೇತ ಆಗಮಿಸಿದ ಶಾಸಕರು ಆಂಜನೇಯ್ಯ ದರ್ಶನ ಪಡೆದು, ದೀಪ ಹಚ್ಚಿದ ಅವರು ಮಾತನಾಡಿ ಕೊರೋನಾ ದಂತಹ ಕತ್ತಲೆಯಿಂದ ಬೆಳಕಿನಡೆಗೆ ಸಾಗಬೇಕಾಗಿದೆ. ದೀಪೋತ್ಸವದಿಂದ ಎಲ್ಲಾ ಕಷ್ಟಗಳು ದೂರವಾಗಲಿ ಎಂದರು. ಈ ಸಂದರ್ಭದಲ್ಲಿ ರಾಜಾ ರಾಮಚಂದ್ರನಾಯಕ, ದೇವಸ್ಥಾನದ ಅರ್ಚಕ ರಮೇಶಹೂಗಾರ, ರಮೇಶ ಮಶ್ಯಾಳ, ಭೀಮನಗೌಡ ಮಹಿಳೇಯರು, ಮಕ್ಕಳು ಇದ್ದರು.