ಕಾರ್ತಿಕ ಮಾಸ ಅಂಗವಾಗಿ ಸಾಮೂಹಿಕ ದೀಪೋತ್ಸವ ಕಾರ್ಯಕ್ರಮ

ರಾಯಚೂರು.ನ.೨೮-ಇಲ್ಲಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಉಪ್ಪಾರವಾಡಿಯಲ್ಲಿ ಕಾರ್ತಿಕ ಮಾಸ ಅಂಗವಾಗಿ ಸಾಮೂಹಿಕ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪ್ರಾಥನಾ ಗೀತೆ ಹಾಗೂ ಅಕ್ಕಿಲ್ ಆಚಾರ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು ಪ್ರವಚನ ನಡೆಸಿದರು. ಸಂಜೆ ಸಂಕಲ್ಪ ಹಾಗೂ ಸ್ವಾಮಿಯ ಪೂಜೆಯೊಂದಿಗೆ ಸಾಮೂಹಿಕ ದೀಪೋತ್ಸವ ವೆಂಕಟೇಶ್ವರ ಸ್ವಾಮಿಯ ಮಹಾಮಂಗಳಾರತಿ ನಡೆಯುತ್ತಾ.
ಈ ಸಂದರ್ಭದಲ್ಲಿ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷರು ಬಾಲಚೇಡ್ ವೆಂಕೋಬ, ಪ್ರಧಾನ ಕಾರ್ಯದರ್ಶಿ ಗಟ್ಟು ಶ್ರೀನಿವಾಸ್, ಜಿಲ್ಲಾ ಉಪ್ಪಾರ ನವಯುವಕರ ಸಂಘ ಅಧ್ಯಕ್ಷರು ಜೂಕೂರು ಶ್ರೀನಿವಾಸ್, ಕಾರ್ಯದರ್ಶಿ ಆರ್. ಶ್ರೀನಿವಾಸ, ಲಕ್ಷ್ಮಿಪತಿ ಬಸವರಾಜ, ಕೃಷ್ಣ ಭಜನ ಮಂಡಳಿ, ಉಪಾಧ್ಯಕ್ಷರು ಜೂಕೂರು ನಿರ್ಮಲ, ಮಹರ್ಷಿ ಭಗೀರಥ ಟ್ರಸ್ಟ್ ಅಧ್ಯಕ್ಷರು ಅಂಬರೀಶ್ ಆದೋನಿ, ಗಜಾನನ ನವಯುವಕ ಸಮಿತಿ ಅಧ್ಯಕ್ಷರು ಸರ್ವಶ ಉಪ್ಪಾರ, ಭಗೀರಥ ಮಹಿಳಾ ಪತ್ತಿನ ಸೌಹಾರ್ದ ಸಹಕಾರಿ ನಿಗಮ ಅಧ್ಯಕ್ಷ ರೇಣುಕಾ ಭಾಲ್ಕಿ , ಪ್ರಧಾನ ಕಾರ್ಯದರ್ಶಿ ಯು ಪದ್ಮಾವತಿ, ಭಗೀರಥ ಮಹಿಳಾ ಮಂಡಳಿ ಅಧ್ಯಕ್ಷ ಪಿ ಸುರೇಖಾ, ಸಮಾಜದ ಮುಖಂಡರು ಅದಿರಾಜ್, ಎಸ್.ಎಲ್.ವೀರೇಶ್, ಚಂದ್ರಶೇಖರ್, ಎಂ. ಶ್ರೀನಿವಾಸ್, ಶ್ರೀಹರಿ ಭಜನೆ ಮಂಡಳಿ ಅಧ್ಯಕ್ಷ ಸೇರಿ ಸಮಾಜದ ಮುಖಂಡರು ಬಡಾವಣೆ ನಿವಾಸಿಗಳು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ.