ಕಾರ್ತಿಕ ಮಾಸದ ದೀಪೆÇೀತ್ಸವ

ಹುಮನಾಬಾದ :ನ.13: ಪ್ರತಿಯೊಬ್ಬರ ಜೀವನದಲ್ಲಿ ಅಜ್ಞಾನವೆಂಬ ಅಂಧಕಾರವನ್ನು ಅಳಿಸಿ ಜ್ಞಾನವೆಂಬ ಬೆಳಕನ್ನು ದಯಪಾಲಿಸಲು ಕಾರ್ತಿಕ ಮಾಸದ ದೀಪೆÇೀತ್ಸವವನ್ನು ಆಚರಿಸಲಾಗುತ್ತದೆ ಎಂದು ಹಿರೇಮಠ ಸಂಸ್ಥಾನದ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ ಹೇಳಿದರು.
ಪಟ್ಟಣದ ಹೊರವಲಯದ ವೈರಾಗಿ ಮಠ ದಕ್ಷೀಣ ಮುಖಿ ಹನುಮಾನ ದೇವಸ್ಥಾನ ಆವರಣದಲ್ಲಿ ಶನಿವಾರ ಕಾರ್ತಿಕ ದೀಪೆÇೀತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಲೋಕ ಕಲ್ಯಾಣಕ್ಕಾಗಿ ಆಚರಿಸುವ ಈ ಬೆಳಕಿನ ಉತ್ಸವದಿಂದ ನಮ್ಮಲ್ಲಿ ನಮ್ಮ ದೇಶದಲ್ಲಿ ಇಡೀ ಜಗತ್ತಿನಲ್ಲಿ ಶಾಂತಿ, ನೆಮ್ಮದಿ, ಸಂಮೃದ್ಧಿ ನೆಲೆಸಲಿ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ದೀಪ ಪ್ರಜ್ವಲಿಸಿದ ನಿಮಗೆಲ್ಲರಿಗೂ ಆಯುರಾರೋಗ್ಯ, ಧನ, ಸಂಪತ್ತು ಪ್ರಾಪ್ತಿಯಾಗಲಿ. ಶತ್ರುಭಯ ನಿವಾರಣೆಯಾಗಲಿ. ನಿಮ್ಮ ಸಂಸಾರ ಸುಖಮಯವಾಗಿರಲಿ. ದೇಶದಲ್ಲಿ ಸುಭಿಕ್ಷೆ ನೆಲೆಸಲಿ. ಎಳ್ಳೆಣ್ಣೆಯಿಂದ ಬೆಳಗಿದ ದೀಪದಿಂದ ನಮ್ಮ ಜನ್ಮ ಜನ್ಮದ ಪಾಪ ನಾಶವಾಗಲಿ. ಅದೇ ರೀತಿ ಆಕಳ ತುಪ್ಪದಿಂದ ಬೆಳಗಿಸಿದ ದೀಪದಿಂದ ಆರೋಗ್ಯ ಸಂಪತ್ತು, ಲಕ್ಷ್ಮೀ ಕಟಾಕ್ಷ ಪ್ರಾಪ್ತಿಯಾಗಲಿ ಎಂದು ಆಶೀರ್ವದಿಸಿ ಶುಭ ಹಾರೈಸಿದರು.
ದೇವಸ್ಥಾನ ಆಡಳಿತ ಮಂಡಳಿಯಿದ ಬೆಳಿಗ್ಗೆ ವೈರಾಗಿ ಮಂಟದ ದಕ್ಷಿಣ ಮುಖಿ ಹನುಮಂತನಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಜೇನು ತುಪ್ಪಾಭಿಷೇಕ, ಮಹಾಪೂಜೆ, ಹೂವಿನಿಂದ ಅಲಂಕಾರ ಮಹಾಮಂಗಳಾರತಿ ಸೇರಿದಂತೆ ವಿಧಿ ವಿಧಾನಗಳಿಂದ ಧಾರ್ಮೀಕ ಕಾರ್ಯಕ್ರಮ ಜರುಗಿತು. ಬಳಿಕ ಸಾಯಂಕಾಲ ವೇಳೆ ದೇವಾಲಯ ಆವರಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮಾತೆಯರಿಂದ ಸಾಲು ಮಣ್ಣಿನ ಹಣತೆಗಳನ್ನಿರಿಸಿ ತೈಲದೀಪಗಳನ್ನು ಬೆಳಗಿಸಿ ದೇವರನ್ನು ಪ್ರಾರ್ಥಿಸಿದರು ದೇವಾಲಯ ಆವರಣ ದ್ವೀಪಗಳಿಂದ ಝಗಝಗಿಸುತ್ತಿತ್ತು.
ಧರ್ಮಸ್ಥಳ ಸ್ವಸಹಾಯ ಸಂಘ, ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಕಿಯರ ಸಂಘ, ಜೀಜಾಮಾತಾ ಮಹಿಳಾ ಮಂಡಳ, ನಿವೇದಿತಾ ಮಹಿಳಾ ಮಂಡಲ, ಅನ್ನಪೂರ್ಣೇಶ್ವರಿ ಮಹಿಳಾ ಸೇವಾ ಸಮಿತಿ, ಯುವಬ್ರಿಗೇಡ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೆ.ಎಂ.ಎಫ್ ಸದಸ್ಯ ರೇವಣಸಿದ್ದಪ್ಪ ಪಾಟೀಲ್ ಭಕ್ತರ ಪ್ರಸಾದ ವ್ಯವಸ್ಥೆ ಮಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ದೇವಾಲಯದ ಪ್ರಧಾನ ಅರ್ಚಕ ಚಂದ್ರಕಾತ ನಿಶಾನದಾರ ದೇವಸ್ಥಾನ ಅಧ್ಯಕ್ಷ ದೇವಾನಂದ ಘವಳಕರ, ವೆಂಕಟೇಶ ಜಾಧವ, ನೀತಿನ ಘವಳಕರ, ಲಕ್ಷ್ಮಿಕಾಂತ್ ಹಿಂದೊಡ್ಡಿ, ಅಂಬಾದಾಸ ಮಡಿವಾಳ, ಕಾಶಿನಾಥ ಸ್ವಾಮಿ ಸೇರಿದಂತೆ ಪಟ್ಟಣದ ನೂರಾರು ಮಹಿಳೆಯರು ಇದ್ದರು. ಕಾರ್ಯಕ್ರಮ ಬಳಿಕ ತೀರ್ಥ ಪ್ರಸಾದ ಸ್ವೀಕರಿಸಿದರು.