ಕಾರ್ತಿಕ್ ಘೋರ್ಪಡೆ ಸಮಾಜ ಸೇವೆ ಹೆಚ್ಚಲಿ ಅವರ ಹುಟ್ಟು ಹಬ್ಬವನ್ನು ವಿಶೇಷ ಪೂಜೆಯೊಂದಿಗೆ ಆಚರಿಸಿದ ಅಭಿಮಾನಿ ಬಳಗ

ಸಂಡೂರು :ನ:10: ಕಾರ್ತಿಕ್ ಘೋರ್ಪಡೆಯವರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಬಹು ಹಿಂದಿನಿಂದಲೂ ಬಡವರ ಬಂಧುವಾಗಿದ್ದಾರೆ ಅವರ ಹುಟ್ಟು ಹಬ್ಬವನ್ನು ಸಮಾಜ ಸೇವೆಯ ಮೂಲಕ ಹಾಗೂ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಆಚರಿಸುತ್ತಿದ್ದೇವೆ ಎಂದು ಕಾರ್ತಿಕ್ ಘೋರ್ಪಡೆ ಅಭಿಮಾನಿ ಬಳಗದ ಅಧ್ಯಕ್ಷ ವಿ.ಅಂಬರೀಷ್ ತಿಳಿಸಿದರು.
ಅವರು ಇಂದು ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಮಾಡಿಸಿ ಕಾರ್ತಿಕ್ ಘೋರ್ಪಡೆಯವರ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಅವರು ಮಾತನಾಡಿ ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿಯ ರೋಗಿಗಳಿಗೆ ಹಾಲು ಹಣ್ಣು ವಿತರಿಸುವ ಕಾರ್ಯಕ್ರಮ ಹಾಗೂ ಬಡವರಿಗೆ ವಸ್ತ್ರ ವಿತರಣೆಯಂತ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಬಡಜನತೆಗೆ ಸಹಾಯ ಹಸ್ತ ಚಾಚಲಾಗುತ್ತದೆ, ಅಲ್ಲದೆ ಕಾರ್ತಿಕ್ ಘೋರ್ಪಡೆಯವರು ಇಡೀ ಸಮಾಜದ ಕೆಳ ಸ್ಥರದ ಸಮಾಜವನ್ನು ಗುರುತಿಸಿ ಅವರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತಹ ಮಹತ್ತರ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ, ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಅಭಿಮಾನ ಬಳಗದವರು ನೇರವರಿಸಿದರು ಈ ಸಂದರ್ಭದಲ್ಲಿ ಮುಖಂಡರಾದ ಈ ಸಂದರ್ಭದಲ್ಲಿ ಶ್ರೀ ಕಾರ್ತಿಕೇಯ ಎಂ.ಘೋರ್ಪಡೆ ಅಭಿಮಾನಿ ಬಳಗದ ಅಧ್ಯಕ್ಷರಾಗಿ ವದ್ದಟ್ಟಿಅಂಬರೀಶ್, ಗೌರವಾಧ್ಯಕ್ಷರಾಗಿ ಸಿ.ಎಸ್. ನರೇಂದ್ರಪಾಟೀಲ್, ಉಪಾಧ್ಯಕ್ಷರಾಗಿ ಎಂ.ಷಣ್ಮುಖಪ್ಪ, ಬಂಡ್ರಿಯ ಎನ್.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಾಮದೇವ, ಖಜಾಂಚಿಯಾಗಿ ಡಿ.ಪ್ರಹ್ಲಾದ್, ಸಂಘಟನಾ ಕಾರ್ಯದರ್ಶಿಯಾಗಿ ದರೋಜಿ ರಮೇಶ್, ಕಾರ್ಯದರ್ಶಿಗಳಾಗಿ ಕೆ.ವಿಜಯಕುಮಾರ್, ಎಲ್.ಕುಮಾರ್ ನಾಯ್ಡು ಉಪಸ್ಥಿತಿ ಇದ್ದರೂ