ಕಾರ್ತಿಕ್ ಎಂಬ ಯುವಕ ಕಾಣೆ

ಹೊಸಪೇಟೆ,ಜ.06: ಇಲ್ಲಿನ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 17 ವರ್ಷದ ಕಾರ್ತಿಕ್ ಎಂಬ ಯುವಕ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ವಯಸ್ಸು ಸುಮಾರು 17 ವರ್ಷ, ಆದಿ ಕರ್ನಾಟಕ (ಚೆಲುವಾದಿ) ಜನಾಂಗ,4-8 ಅಡಿ ಎತ್ತರ, 03ನೇ ತರಗತಿ ವಿದ್ಯಾಭ್ಯಾಸ, ಕೋಲು ಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ, ಬಲಭುಜದ ತೋಳಿನ ಮೇಲೆ ಆಂಜಿನೇಯ ಮೂರ್ತಿ ಅಚ್ಚೆ ಗುರುತು ಇರುತ್ತದೆ,ಕೇಸರಿ ಬಣ್ಣದ ಗೆರೆವುಳ್ಳ ತುಂಬು ತೋಳುವುಳ್ಳ ಅಂಗಿ ಮತ್ತು ನಸಿ ಬಣ್ಣದ ಪ್ಯಾಂಟ್ ಧರಿಸುತ್ತಾರೆ, ಕನ್ನಡ ಭಾಷೆ ಮಾತನಾಡುತ್ತಾರೆ.ಈ ಯುವಕನ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ : 08394-224033, ಪಿ.ಐ.ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ : 9480803070, ಡಿ.ಎಸ್.ಪಿ.ಹೊಸಪೇಟೆ : 08394-224204, ಎಸ್.ಪಿ. ಬಳ್ಳಾರಿ : 08392-258400 ಗೆ ಸಂಪರ್ಕಿಸಲು ತಿಳಿಸಿದ್ದಾರೆ.