ಕಾರ್ಡಿನಲ್ಲಿ ಕಥೆ” ರಾಜ್ಯ ಮಟ್ಟದ ಉಚಿತ ಲಿಖಿತ ಸ್ಪರ್ಧೆಯ ಫಲಿತಾಂಶ

 “
ದಾವಣಗೆರೆ, ನ.4; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ 66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 50 ಪೈಸೆ ಅಂಚೆ ಕಾರ್ಡಿನಲ್ಲಿ ರಾಜ್ಯ ಮಟ್ಟದ ಉಚಿತವಾಗಿ “ಕಾರ್ಡಿನಲ್ಲಿ ಕಥೆ” ಬರೆಯುವ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಶ್ರೀಮತಿ ಸುನಂದದೇವಿ ಜಂಬನಗೌಡ ತಿಳಿಸಿದ್ದಾರೆ.ಪ್ರಥಮ ಬಹುಮಾನ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಶ್ರೀಮತಿ ರೇಖಾ ಶ್ರೀನಿವಾಸ್, ದ್ವಿತೀಯ ಬಹುಮಾನ ದಾವಣಗೆರೆಯ ಶ್ರೀಮತಿ ಕುಸುಮಾ ಲೋಕೇಶ್, ತೃತೀಯ ಬಹುಮಾನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಶ್ರೀಮತಿ ಗಾಯತ್ರಿ ಪಿ.ರಾಯ್ಕರ್, ಸಮಾಧಾನಕರ ಬಹುಮಾನಗಳು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕುಮಾರಿ ನವ್ಯಾ ಮನೋಹರ ಪೈ, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕುಂಬಾಶಿಯ ಕುಮಾರಿ ವೈಷ್ಣವಿ ಪುರಾಣಿಕ್ ಪಡೆದಿರುತ್ತಾರೆ ಎಂದು ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.