ಕಾರ್ಡಿನಲ್ಲಿ ಕಥೆ’ ಕಲಾಕುಂಚದಿಂದ ರಾಜ್ಯ ಮಟ್ಟದ ಉಚಿತ ಸ್ಪರ್ಧೆ

ದಾವಣಗೆರೆ.ಡಿ.೧೮;ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ತನ್ನ 31ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದಲ್ಲಿ 50 ಪೈಸೆ ಅಂಚೆ ಕಾರ್ಡಿನಲ್ಲಿ “ಕಾರ್ಡಿನಲ್ಲಿ ಕಥೆ” ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ಉಚಿತ ಪ್ರವೇಶಾವಕಾಶವಿರುವ ಈ ಸ್ಪರ್ಧೆಯಲ್ಲಿ ಯಾವುದೇ ವಯೋಮಾನದ ಪರಿಮಿತಿ ಇಲ್ಲದೇ ಸಾರ್ವಜನಿಕವಾಗಿ ಯಾರಾದರೂ ಭಾಗವಹಿಸಬಹುದು. ಒಬ್ಬರೇ ಎಷ್ಟು ಬೇಕಾದರೂ ಕಥೆ ಬರೆದು ಕಳಿಸಬಹುದು. ಆದರೆ ಅಂಚೆ ಕಾರ್ಡಿನಲ್ಲೇ ಬರೆಯಬೇಕು. ವಿಷಯ ಸ್ಪರ್ಧಿಗಳ ಆಯ್ಕೆ. ಸ್ಪರ್ಧಿಗಳು ತಮ್ಮ ಪೂರ್ಣ ಪ್ರಮಾಣದ ವಿಳಾಸ ವ್ಯಾಟ್ಸಪ್ ನಂಬರ್ ಕಳಿಸಬೇಕು.ಎಲೆಮರೆಯ ಕಾಯಿ, ಅವಕಾಶವಂಚಿತ ಬರಹಗಾರರಿಗೆ ಮುಕ್ತವಾದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧೆಗಳು 31-12-2020ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದಾಗಿದೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಕಲಾಕುಂಚದ ಚಿತ್ರದುರ್ಗ ಜಿಲ್ಲಾ ಪ್ರತಿನಿಧಿ ಶ್ರೀಮತಿ  ಶೋಭಾ ಮಂಜುನಾಥ್ ತಿಳಿಸಿದ್ದಾರೆ.ಬಹುಮಾನ ವಿಜೇತರಿಗೆ ಮಾತ್ರ ಅವರ ವ್ಯಾಟ್ಸಪ್‌ಗೆ ಫಲಿತಾಂಶ ಮತ್ತು ಪ್ರಮಾಣ ಪತ್ರ ಕಳಿಸಲಾಗುವುದು ಎಂದು ಸಂಸ್ಥೆಯ ಸಂಚಾಲಕರಾದ ಬೇಳೂರು ಸಂತೋಷಕುಮಾರ್ ಶೆಟ್ಟಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ಮತ್ತು ಅಂಚೆ ಕಾರ್ಡಿನ ಅಂಚೆಯ ಮೂಲಕ ಕಳಿಸುವ ವಿಳಾಸ ಶ್ರೀಮತಿ  ಶೋಭಾ ಮಂಜುನಾಥ್  #26, ಮೊದಲನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಶ್ರೀ ವೆಂಕಟರಮಣ ದೇವಸ್ಥಾನದ ಕಲ್ಯಾಣ ಮಂಟಪದ ಹಿಂಭಾಗ, ಬ್ಯಾಂಕ್ ಕಾಲೋನಿ, ಚಿತ್ರದುರ್ಗ-577501. 9901122910, 9901122728.