ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಕಲಬುರಗಿ : ಜು.27:ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ತಾಲೂಕಿನ ಅವರಾದ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪಳವ ಗ್ರಾಮದಲ್ಲಿ ಸಸಿಗಳನ್ನು ನೆಡುವ ಮೂಲಕ ಯುದ್ಧದಲ್ಲಿ ವೀರ ಮರಣ ಹೊಂದಿದ ಭಾರತಿಯ ಯೋಧರಿಗೆ ಗೌರವ ನಮನ ಸಲ್ಲಿಸಿ, ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಯೂಥ್ ಅಡ್ವೆಂಚರ್ ಸ್ಫೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್ ಆರ್ ಕನ್ನಡಿಗ, ಗ್ರಾಮೀಣ ಪೆÇಲೀಸ್ ಠಾಣೆ ಕಾನ್ಸ್ಟೇಬಲ್ ಬಸವರಾಜ್ ಹಳ್ಳಿ, ಗ್ರಾಮಸ್ಥರಾದ ರಜಿನಿಕಾಂತ್ ಜಮಾದಾರ್. ನಾಗಣ್ಣ ರೆಡ್ಡಿ, ಮಲ್ಲಿಕಾರ್ಜುನ್, ಗಣೇಶ, ಅಭಿಷೇಕ, ಶಿವಾನಂದ, ಉಮಾದೇವಿ, ಅಣವೀರಪ್ಪ, ಮೋಹನ್, ವೀರೇಶ್ ಉಪಸ್ಥಿತರಿದ್ದರು.