ಕಾರ್ಗಿಲ್ ವಿಜಯೋತ್ಸವ, ಹುತಾತ್ಮ ಯೋಧರ ಸ್ಮರಣೆ

ಔರಾದ : ಜು.28:ಕಾರ್ಗಿಲ್ ವಿಜಯಕ್ಕೆ ಪ್ರಮುಖರಾದ ವೀರಯೋಧರ ಸ್ಮರಣೆ ನಮ್ಮೆಲ್ಲರಿಗೂ ಗೌರವದ ದಿವಸ ಎಂದು ಸಂತಪುರ್ ಸಿದ್ದರಾಮೇಶ್ವರ ಕಾಲೇಜಿನ ಉಪನ್ಯಾಸಕಿ ಮೀರಾತಾಯಿ ಕಾಂಬಳೆ ಹೇಳಿದರು.

ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಭಾರತೀಯ ವೀರಯೋಧರ ಸಾಹಸ,ತ್ಯಾಗ, ಬಲಿದಾನದಿಂದ ನಾವಿಂದು ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿದ್ದೇವೆ. ಆಪರೇಷನ್ ವಿಜಯ ಕಾರ್ಯಚರಣೆ ಮೂಲಕ ಗೆಲುವು ಸಾಧಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ್ ಮಾತನಾಡಿ,ಕಾರ್ಗಿಲ್ ವಿಜಯ ಸಾಧಿಸಿ ಇಂದಿಗೆ 23 ವರ್ಷ ಕಳೆದರೂ ನಮ್ಮ ಭಾರತೀಯರಲ್ಲಿ ದೇಶ ಮತ್ತು ಸೈನಿಕರ ಬಗ್ಗೆ ಇರುವ ಗೌರವ ನಿಜಕ್ಕೂ ದೇಶ ಪ್ರೇಮ ಸಂಕೇತ ವಾಗಿದೆ. ಭಾರತ ಸುಸಂಸ್ಕøತ ಮತ್ತು ಕಾರ್ಗಿಲ್ ವಿಜಯ ವೀರ ಶೂರರ ನಾಡು ನಮ್ಮೆಲ್ಲರಿಗೂ ವಿಜಯದ ದಿವಸ ಎಂದು ಹೆಮ್ಮೆ ಪಟ್ಟರು.

ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತವಾಗಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಧ್ವಜ ಪ್ರದರ್ಶಿಸುವ ಮೂಲಕ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು.

ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ,ಸ್ವಾತಿ ಸಿರಂಜಿ, ಅಂಬಿಕಾ ವಿಶ್ವಕರ್ಮ ಸೇರಿದಂತೆ ಇತರರಿದ್ದರು.