ಕಾರ್ಗಿಲ್ ವಿಜಯೋತ್ಸವ ಹಾಗೂ ಸೈನಿಕ-ವಿದ್ಯಾರ್ಥಿ ಸಂವಾದ ಕಾರ್ಯಕ್ರಮ

ವಿಜಯಪುರ, ಜು.26-ಇಲ್ಲಿನ ಪ್ರತಿಷ್ಠಿತ ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯಡಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಸೈನಿಕ-ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಕಾರ್ಗಿಲ್ ಯೋಧರಾದ ವಸಂತ ಕೃಷ್ಣರಾವ ಮುಜುಂದಾರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕ್‍ನ ರಣ ರೋಚಕ ಕಥೆಗಳನ್ನು ಹೇಳಿದರು. ವಿಕ್ರಂ ಭಾಟ್ರಾ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಲು ಕರೆ ನೀಡಿದರು. ಸೈನಿಕರು ದೇಶದ ಬೆನ್ನೆಲುಬು. ಭಾರತವು ಶಾಂತಿಪ್ರಿಯ ದೇಶವಾಗಿದೆ. ಭಾರತ ಯಾರೊಂದಿಗೂ ಕೂಡ ಯುದ್ಧಕ್ಕೆ ಇಳಿದಿಲ್ಲ. ಯುದ್ಧಕ್ಕೆ ಇಳಿದಲ್ಲಿ ಯಾರನ್ನೂ ಬಿಟ್ಟಿಲ್ಲ. ಸೈನಿಕರ ಕುಟುಂಬಗಳಿಗೆ ಭೇಟಿ ಮಾಡಿರಿ, ಸೈನಿಕರ ಶಿಸ್ತು ಸಂಯಮ, ಸಮಯ ಪ್ರಜ್ಞೆಗಳನ್ನು ಎಲ್ಲ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಮೊಬೈಲ್‍ಗಳ ಬಳಕೆ ಕಡಿಮೆಮಾಡಿ, ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಅದರಂತೆ ಅಗ್ನಿಪಥ ಯೋಜನೆಯ ಕುರಿತು ತಿಳಿದುಕೊಳ್ಳಿರಿ ಎಂದು ಸಲಹೆ ನೀಡಿದರು.
ನಿವೃತ್ತ ಕಾರ್ಗಿಲ್ ಯೋಧರಾದ ವಸಂತ ಕೃಷ್ಣರಾವ ಮುಜುಂದಾರ ಸೈನಿಕ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಸೈನಿಕ ನಡುವೆ ಸಂವಾದ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳು ಅನೇಕ ಪ್ರಶ್ನೆಗಳನ್ನು ಕೇಳಿ, ಉತ್ತರವನ್ನು ಪಡೆದುಕೊಂಡು ಮುಂದೆ ಸೈನಿಕರಾಗುವ ಭರವಸೆಯನ್ನು ಅತಿಥಿಗಳಿಗೆ ನೀಡಿದರು.
ಈ ಸಂದರ್ಭ ಶ್ರೀ ರುಕ್ಮಾಂಗದ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆನಂದ ಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಗಿಲ್ ಎಂಬುದು ಅನೇಕ ದೇಶ ಭಕ್ತರ ಶೌರ್ಯ ಸೈನಿಕರ ನೈಜ ಜೀವನವನ್ನು ಮತ್ತು ಸಾಧನೆಯನ್ನು ಎತ್ತಿ ಹಿಡಿಯುವ ಪದ. ನಾವು ಪ್ರತಿದಿನ ದೇಶ ಭಕ್ತರನ್ನ ನೆನೆಯಲೇಬೇಕು. ಇದೊಂದು ರಾಷ್ಟ್ರೀಯ ಕಾರ್ಯಕ್ರಮವೆಂದು ನಮ್ಮಸಂಸ್ಥೆಯಲ್ಲಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅರುಣ ಸೋಲಾಪುರಕರ ಮಾತನಾಡಿ, ಮಕ್ಕಳಲ್ಲಿ ದೇಶ ಭಕ್ತಿಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಮಾಡಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು. ಹಾಗೂ ಮಕ್ಕಳಿಗೂ ಕೂಡ ಸೈನಿಕರ ಜೀವನವನ್ನು ಅರಿತುಕೊಳ್ಳಿ ಅವರ ಸಾಧನೆಯನ್ನು ತಿಳಿದುಕೊಳ್ಳಿ ಎಂದು ಸೂಚಿಸಿದರು.
ಶ್ರೀ ರುಕ್ಮಾಂಗದ ಹೈಸ್ಕೂಲ್ ಮುಖ್ಯ ಗುರುಗಳಾದ ಶ್ರೀ ಎಲ್.ಎಚ್.ಕುಲಕರ್ಣಿ ಪ್ರಾರ್ಥಿಸಿದರು. ಶ್ರೀ ರುಕ್ಮಾಂಗದ ಬಾಲಕಿಯರ ಪ್ರೌಢ ಶಾಲೆ ಮುಖ್ಯ ಗುರುಗಳಾದ ಪಿ. ಎ. ದೀಕ್ಷಿತ ಸ್ವಾಗತಿಸಿದರು. ಶರಣಪ್ಪ ನಾಯಕ ನಿರೂಪಿಸಿದರು. ಆರ್.ಕೆ.ಕುಲಕರ್ಣಿ ವಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಂ.ಎಸ್.ಕುಲಕರ್ಣಿ, ಸಹ ಗೌರವ ಕಾರ್ಯದರ್ಶಿಗಳಾದ ಆರ್.ಎಸ್. ದೇಶಪಾಂಡೆ, ಸದಸ್ಯರಾದ ಆರ್.ಡಿ.ಕುಲಕರ್ಣಿ ಸಂಸ್ಥೆಯ ಎಲ್ಲ ಶಾಲೆಗಳ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು.