ಕಾರ್ಗಿಲ್ ವಿಜಯೋತ್ಸವ: ಯೋಧರಿಗೆ ಸನ್ಮಾನ

ದಾವಣಗೆರೆ.ಜು.೨೭ : ಲಯನ್ಸ್ ಕ್ಲಬ್, ದಾವಣಗೆರೆ ಹಾಗೂ ಅಂಗ ಸಂಸ್ಥೆಗಳಾದ ಲಯನ್ಸ್ ಟ್ರಸ್ಟ್ ಹಾಗೂ ಲಯನ್ಸ್ ಸ್ಕೂಲ್ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು  ದಾವಣಗೆರೆ ಲಯನ್ಸ್ ಭವನದಲ್ಲಿ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಮುರುಗೇಶ್ ಬಿ.ಎನ್. ಮತ್ತು ಹೆಚ್. ಸುರೇಶರಾವ್ ಹವಾಲ್ದಾರ್ ಅವರನ್ನು ಸನ್ಮಾನಿಸಲಾಯಿತು.ದಾವಣಗೆರೆ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾದ ಲಯನ್ ಎನ್.ಆರ್. ನಾಗಭೂಷಣರಾವ್  ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕಣವಿ ನಟರಾಜ್, ಖಜಾಂಚಿ ಎಸ್.ಕೆ. ಮಲ್ಲಿಕಾರ್ಜುನ್, ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಬಂಡಿವಾಡ,  ಶಿವಾನಂದ,  ಕೋರಿ ಶಿವಕುಮಾರ್,  ನೀಲಿ ಉಮೇಶ್,  ಪ್ರವೀಣ್‌ರಾವ್ ಪವಾರ್,  ಅಮಿತ್, ಲಯನ್ಸ್ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನಿವೃತ್ತ ಎ.ಪಿ.ಎಂ.ಸಿ. ಉದ್ಯೋಗಿ ಲೋಕೇಶ್ ಲಯನ್ಸ್ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಕಾರ್ಯಕ್ರಮದಲ್ಲಿ ದೇವರಮನೆ ನಾಗರಾಜ್ ಅವರು ನಿರೂಪಿಸಿದರು, ಸಹ ಕಾರ್ಯದರ್ಶಿ  ಭೀಮಾನಂದ ಶೆಟ್ಟಿ ವಂದನಾರ್ಪನೆಯನ್ನು ಮಾಡಿದರು. ಲಯನ್ಸ್ ಶಾಲೆಯ ಮಕ್ಕಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.