ಕಾರ್ಗಿಲ್ ವಿಜಯೋತ್ಸವ ಮೆರವಣಿಗೆ ಜಾಥಾ

ಹುಬ್ಬಳ್ಳಿ,ಜು.26: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ವೀರ ಮರಣ ಹೊಂದಿದ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರಮಠದ ಮಹಿಳಾ ಕಾಲೇಜು ಹಾಗೂ ಲ್ಯಾಮಿಂಗ್ಟನ್ ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆ ಜಾಥಾ ನಡೆಸಿದರು.
ಜೆಸಿ ನಗರದಿಂದ ಚೆನ್ನಮ್ಮ ವೃತ್ತದವರೆಗೆ ವಿಜಯೋತ್ಸವ ಮೆರವಣಿಗೆ ಸಾಗಿ, ಜೆಸಿ ನಗರಕ್ಕೆ ಮರಳಿ ಮುಕ್ತಾಯಗೊಂಡಿತು.
ಪ್ರಾಂಶುಪಾಲರಾದ ಲಿಂಗರಾಜ್ ಅಂಗಡಿ ಮಾತನಾಡಿ ಕಾರ್ಗಿಲ್ ಯುದ್ಧವು ಸುಮಾರು 74 ದಿನಗಳವರೆಗೆ ನಡೆಯಿತು. ಈ ಯುದ್ಧದಲ್ಲಿ 527 ಸೈನಿಕರು ಹುತಾತ್ಮರಾಗಿದ್ದರು. ಅಂದಿನ ಯುದ್ಧದಲ್ಲಿ ಹೋರಾಡಿದ ಮಹಾನ್ ವೀರರ ಸವಿ ನೆನಪು ಹಾಗೂ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿ.ಎಸ್.ವಿ. ಪ್ರಸಾದ್, ಬಿ.ಗೋವಿಂದ್ ರಾವ್, ಶಿವಲೀಲಾ ವೈದ್ಯನಾಥ, ಜ್ಯೋತಿ ಲಕ್ಷ್ಮೀ ಪಾಟೀಲ್, ಶಾಲಾ-ಕಾಲೇಜ್ ಶಿಕ್ಷಕ ವೃಂದ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.