ಕಾರ್ಗಿಲ್ ವಿಜಯೋತ್ಸವ ದಿನಾಚರಣೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.27: ನಗರದ ಪ್ರತಿಷ್ಠಿತ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳ ಪದಗ್ರಹಣ ಕಾರ್ಯಕ್ರಮ ಮತ್ತು ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಲ್ ಗಿರೀಶ ಶಿಂದೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಸ್ಪರ್ದಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು. ಮಕ್ಕಳು ಶಿಸ್ತನ್ನು ರೂಢಿಸಿಕೊಳ್ಳಬೇಕು ಅಂದಾಗ ಉತ್ತಮ ನಾಯಕನಾಗಲು ಸಾಧ್ಯ ಎಂದರು.
ಇದೆ ಸಂದರ್ಭದಲ್ಲಿ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ನಿರ್ದೇಶಕರಾದ ಶ್ರೀ ಶರತ ಬಿರಾದಾರ ಅವರು ಕಾರ್ಗಿಲ್ ವಿಜಯದಿವಸದ ಶುಭಾಶಯವನ್ನು ಕೋರಿ, ಮಾತನಾಡುತ್ತ ವಿದ್ಯಾರ್ಥಿಗಳು ದೇಶಪ್ರೇಮ, ಆತ್ಮವಿಶ್ವಾಸ, ಪ್ರಾಮಾಣಿಕತೆ, ನಿರ್ಧಾರ ತೆಗೆದುಕೊಳ್ಳುವ ಗುಣ, ಸೃಜನಶೀಲತೆ ಮುಂತಾದ ಗುಣಗಳನ್ನು ಬೆಳೆಸಿಕೊಂಡಾಗ ಭವಿಷÀ್ಯತ್ತಿನಲ್ಲಿ ಉತ್ತಮ ನಾಯಕನಾಗಲು ಸಾಧ್ಯ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಶೀಲಾ ಬಿರಾದಾರ ಹಾಗೂ ಚೇರಮನ್‍ರಾದ ಡಾ.ಸುರೇಶ ಬಿರಾದಾರ ಅವರು ಕಾರ್ಗಿಲ್ ವಿಜಯದಿವಸ ಮತ್ತು ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ಪ್ರಾಚಾರ್ಯರಾದ ಶ್ರೀ ಶ್ರೀಧರ ಕುರಬೇಟ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಶಶಿಧರ ಲೋನಾರಮಠ ಸ್ವಾಗತಿಸಿದರು. ಶಿಕ್ಷಕಿಯಾದ ತÀಬಸುಮ್ ಸಾಂಗ್ಲೀಕರ್, ಮಧುಮತಿ ಪಡತರೆ ನಿರೂಪಿಸಿದರು. ಶಾಲಾ ನಾಯಕನಾಗಿ ಅರ್ಪಿತ ಹಡಪದ, ಉಪನಾಯಕಿಯಾಗಿ ಉನ್ನತಿ ಮೆಹತಾ, ಕ್ರೀಡಾ ನಾಯಕನಾಗಿ ಶಾನ ಸಗರ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ಪಾಕಿಸ್ತಾನ ಸೈನಿಕರ ವಿರುದ್ಧ ಹೋರಾಡಿ ಪ್ರಾಣತೆತ್ತ ಸೈನಿಕರಿಗೆ ಪುಷ್ಪನಮನ ಸಲ್ಲಿಸಿ ಸ್ಮರಿಸಲಾಯಿತು. ನಂತರ ಮಕ್ಕಳಿಂದ ದೇಶಭಕ್ತಿ ಗೀತೆ, ಛದ್ಮವೇಷÀ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರಾದ ಎ.ಹೆಚ್. ಸಗರ, ಪ್ರವೀಣ ಗೆಣ್ಣೂರ, ಅನೀಲ ಬಾಗೆವಾಡಿ, ಅಶ್ವೀನ ವಗದರಗಿ, ಬಸವರಾಜ ರೆಬಿನಾಳ, ಶ್ರೀದೇವಿ ಜೊಳದ, ಸವಿತಾ ಪಾಟೀಲ್, ಸೀಮಾ ಸದಲಗ, ಸರೊಜಾ ಕರಕಳ್ಳಿ, ಶ್ವೇತಾ, ಸುರೇಖಾ, ಹೀನಾ ಕೌಸರ, ಅಶ್ವಿನಿ, ಮುಂತಾದವರು ಉಪಸ್ಥಿತರಿದ್ದರು.