ಕಾರ್ಗಿಲ್ ವಿಜಯೋತ್ಸವ; ದಾವಣಗೆರೆಯಲ್ಲಿ ತ್ರಿವರ್ಣಧ್ವಜದೊಂದಿಗೆ ಬೈಕ್ ರ್ಯಾಲಿ

ದಾವಣಗೆರೆ.ಜು.೨೬: ಕಾರ್ಗಿಲ್ ವಿಜಯೋತ್ಸವದ‌ ಅಂಗವಾಗಿ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರೇರಣಾ ಸಂಸ್ಥೆಯಿಂದ ಎನ್ ಫೀಲ್ಡ್ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.ತ್ರಿವರ್ಣ ಧ್ವಜ ತೋರಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಮಾಜಿ ಮೇಯರ್ ಎಸ್ ಟಿ ವೀರೇಶ್ ಹಾಗೂ ಹಾಲಿ ಮೇಯರ್ ಜಯಮ್ಮ ಗೋಪಿ ನಾಯ್ಕ ಕಳೆದ 23ವರ್ಷಗಳ ಹಿಂದೆ ಕಾರ್ಗಿಲ್ ವಿಜಯೋತ್ಸವಕ್ಕೆ ಕಾರಣರಾದ ಎಲ್ಲಾ ಯೋಧರಿಗೆ ಅಭಿನಂದನೆಯನ್ನು ಸಲ್ಲಿಸಿದರು.ಈ ವೇಳೆ ಮಾತನಾಡಿದ ಮಾಜಿ ಮೇಯರ್ ಎಸ್.ಟಿ. ವೀರೇಶ್, ಕಳೆದ 24ವರ್ಷಗಳ ಹಿಂದೆ ಕಾರ್ಗಿಲ್ ನಂತಹ ದುರ್ಗಮ ಪ್ರದೇಶದಲ್ಲಿ ಪಾಕಿಸ್ತಾನದ ನುಸುಳುಕೋರರು ಅಕ್ರಮವಾಗಿ ನಮ್ಮ ನೆಲ ಗಳನ್ನು ವಶಪಡಿಸಿಕೊಂಡರು. ಇದನ್ನು ಅರಿತ ಭಾರತದ ಸೇನೆಯು ಅತಿ ಕಡಿಮೆ ಉಷ್ಣಾಂಶದಲ್ಲೂ ಅಲ್ಲಿಗೆ ತೆರಳಿ ಪಾಕಿಸ್ತಾನದ ನುಸುಳುಕೋರರನ್ನು ಬಗ್ಗು ಬಡಿಯುವ ಮೂಲಕ ಅವರನ್ನು ಭಾರತದಿಂದ ಹಿಮ್ಮೆಟ್ಟಿಸಿ ಕಾರ್ಗಿಲ್ ಅನ್ನು ವಶಪಡಿಸಿಕೊಂಡ ದಿನವೇ ಈ ದಿನ. ಇಂಥ ಆ ದಿನದಂದು ಹಲವಾರು ಯೋಧರು ಹುತಾತ್ಮರಾಗಿದ್ದಾರೆ ಅವರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸೋಣ ಹಾಗೂ ದೇಶವನ್ನು ಕಾಯುತ್ತಿರುವ ಯೋಧರಿಗೆ ನಮನ ಸಲ್ಲಿಸೋಣ ಎಂದರು.ಸೇನೆಯ ನಿವೃತ್ತಯೋಧ ಮಂಜಾನಾಯ್ಕ ಮಾತನಾಡಿ, ಭಾರತದ ಸೇನೆ ಅದರಲ್ಲೂ ನಮ್ಮ ಭಾರತೀಯರ ಯಾವುದೇ ಸೇನೆಗಳು ಯಾವುದೇ ಯುದ್ಧಗಳಾಗಲೀ ಯಾವುದೇ ಕಾರ್ಯಾಚರಣೆಗಳಾಗಲಿ ಭಾರತೀಯ ಸೇನೆಗಳಿಗೆ ಜಯ ಕಟ್ಟಿಟ್ಟ ಬುತ್ತಿ. ಅಂತೆಯೇ ಕಾರ್ಗಿಲ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸಹ ಯಾರಿಗೂ ಎದೆಗುಂದದೆ ಎಂತಹ ಪರಿಸ್ಥಿತಿಯಲ್ಲೂ ಪ್ರತಿಕೂಲ ಅವಮಾನ ಇದ್ದರೂ ಸಹ ಪಾಕಿಸ್ತಾನಿಯರನ್ನು ಹಿಮ್ಮೆಟ್ಟಿಸಿದ ನಿಜಕ್ಕೂ ಶ್ಲಾಘನೀಯ ಎಂದು ಸ್ಮರಿಸಿದರು.ಈ ವೇಳೆ ಬೈಕ್ ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು