ಕಾರ್ಗಿಲ್ ವಿಜಯೋತ್ಸವ: ಗೌರವ ಸಮರ್ಪಣೆ

ಧಾರವಾಡ, ಜು.26: ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಯೋಗದಲ್ಲಿ ಕಾರ್ಗಿಲ್ ಯುದ್ದದ 23ನೇ ವಿಜಯೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಸೈನಿಕ ಅಧಿಕಾರಿಗಳು ಪುಷ್ಪ ನಮನ, ಗೌರವ ಸಮರ್ಪಣೆ ಮಾಡಿದರು.

ಕರ್ನಾಟಕ 24 ಎನ್.ಸಿ.ಸಿ ಬಟಾಲಿಯನ್ ಘಟಕದ ಕೆಡೆಟ್‍ಗಳು ಕಾರ್ಗಿಲ್ ಸ್ತೂಪ ಹಾಗೂ ಅತಿಥಿಗಳಿಗೆ ಗೌರವ ರಕ್ಷೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜಿಲ್ಲಾಡಳಿತದಿಂದ ಮತ್ತು ಜಿಲ್ಲಾ ಸೈನಿಕ ಮಂಡಳಿವತಿಯಿಂದ ನಿರ್ದೇಶಕರಾದ ನಿವೃತ್ತ ಲೇಪ್ಟಿನೆಂಟ್ ಕರ್ನಲ್ ಡಾ.ಯು.ಎಸ್.ದಿನೇಶ ಹಾಗೂ ವಿವಿಧ ಹುದ್ದೆಗಳ ನಿವೃತ್ತ ಸೇನಾಧಿಕಾರಿಗಳಾದ ಸುಬೇದಾರ ಮೇಜರ್ ಉಮೇಶ ಅಕ್ಕಿಹಾಳ ಅವರು ಭೂ ಸೇನೆ ಪರವಾಗಿ, ಲೇ.ಕ.ವಿಜಯ ಪಾಟೀಲ ಅವರು ನೌಕಾಪಡೆ ಪರವಾಗಿ, ಸಜರ್ಂಟ್ ಜಗದೀಶ ಕುರಬೆಟ್ಟ ಅವರು ವಾಯು ಸೇನೆ ಪರವಾಗಿ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು.

ಕರ್ನಾಟಕ 24 ಎನ್.ಸಿ.ಸಿ. ಬಟಾಲಿಯನ್ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ಅಜಯ ಆರ್.ಚೌದರಿ, ಸೇನಾ ಮೆಡಲ್ ಸುಬೇದಾರ ಗಿರಿಧರ ಸಿಂಗ್, ಕರ್ನಾಟಕ 5 ಎನ್.ಸಿ.ಸಿ.ಗಲ್ರ್ಸ್ ಬಟಾಲಿಯನ್ ಘಟಕದ ಕಮಾಂಡಿಂಗ್ ಆಫೀಸರ್ ಕರ್ನಲ್ ಜೆ.ಪಿ.ಮಿಶ್ರಾ ಹಾಗೂ ಇತರ ನಿವೃತ್ತ ಸೇನಾಧಿಕಾರಿಗಳು, ಸೈನಿಕರು, ವಿದ್ಯಾರ್ಥಿಗಳು ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಸಿದರು.

ಮೇಜರ್ ಸಿ.ಎಸ್.ಆನಂದ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ಏರ್ ಕಮಾಂಡರ್ ಸಿ.ಎಸ್.ಹವಲ್ದಾರ ಅವರು ವಂದಿಸಿದರು.

ಕಾರ್ಗಿಲ್ ವಿಜಯೋತ್ಸವದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾ ಅಧಿಕಾರಗಳು, ಯುದ್ಧ ಸಂತ್ರಸ್ಥರು, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು, ಸಾರ್ವಜನಿಕರು, ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.