ಕಾರ್ಗಿಲ್ ವಿಜಯೋತ್ಸವ ಆಚರಣೆ,


(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜು.27; ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಕ್ರೀಯಾಶೀಲ ಗೆಳೆಯರ ಬಳಗ, ದೇಶಾಭಿಮಾನಿ ಯುವಕರು ಹಾಗೂ ಬಸವ ಜ್ಯೋತಿ ಕ್ಲಾಸಿಸ್ ಮಕ್ಕಳಿಂದ 24ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಸ್ವಯಂ ಪ್ರೇರಣೆಯಿಂದ ಸೇರಿದ ಯುವಕರು, ಮಕ್ಕಳು ಗಡಿ ಕಾಯುವ ವೀರ ಯೋಧರಿಗೆ, ಹುತಾತ್ಮ ಯೋಧರಿಗೆ ಜಯ ಘೋಷ ಮೊಳಗಿಸಿದರು. ಕೈಯಲ್ಲಿ ದೀಪ ಹಿಡಿದು, ಮೌನಾಚರಣೆ ಮಾಡಿ ಕಾರ್ಗಿಲ್ ಹುತಾತ್ಮ ಯೋಧರಿಗೆ ಭಕ್ತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು.
ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಮಾತನಾಡಿ, `ದೇಶದ ಗಡಿ ಕಾಯುತ್ತಿರುವ ಯೋಧರು, ದೇಶಕ್ಕೆ ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಸ್ಮರಣೆ ಮಾಡಬೇಕು. ಪಾಲಕರು ಮಕ್ಕಳಿಗೆ ರಾಷ್ಟ್ರಾಭಿಮಾನ ಬೆಳೆಸಿ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿಕೊಡಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಗಡಿ ಕಾಯುವ ಯೋಧರಾಗಿ ಹೊರಹೊಮ್ಮಬೇಕು’ ಎಂದರು.
ಶಿಕ್ಷಕರಾದ ಸಂತೋಷ ಹುಣಶೀಕಟ್ಟಿ, ಚಂದ್ರಶೇಖರ ವಾಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ, ಮಹತ್ವ ವಿವರಿಸಿದರು. ನಿವೃತ್ತ ಯೋಧರಾದ ಬಸವರಾಜ ಸರಾಯದ, ಈರಪ್ಪ ಕಾಡೇಶನವರ, ಆನಂದ ತೋಟಗಿ, ಮಂಜುನಾಥ ಜ್ಯೋತಿ, ಸಂತೋಷ ಬಶೆಟ್ಟಿ, ಆನಂದ ಹಿರೇಮಠ, ಬಸವರಾಜ ತಿಗಡಿ, ರವಿ ವನ್ನೂರ, ಬಸವರಾಜ ಕಟ್ಟಿಮನಿ, ಶ್ರೀಶೈಲ ಹಂಪಿಹೊಳಿ, ಮಂಜುನಾಥ ಬಗಾಡೆ, ಮಂಜುನಾಥ ಕರಿಗಾರ, ಗಂಗಾಧರ ಸಾಲಿಮಠ, ಉದಯ ಕೋಳೆಕರ, ಶರೀಫ ನದಾಫ, ರವಿ ಹುಲಕುಂದ, ಯುನಸ್ ಬಡೇಘರ, ಬಸವ ಜ್ಯೋತಿ ಕ್ಲಾಸಿಸ್ ವಿದ್ಯಾರ್ಥಿಗಳು ಇದ್ದರು.