ಕಾರ್ಗಿಲ್ ವಿಜಯೋತ್ಸವದ ಮೇಣದ ಬತ್ತಿ ಮೆರವಣಿಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,27- ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಘಟಕದಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಿನ್ನೆ ಸಂಜೆ ನಗರದ  ಗಡಗಿ ಚೆನ್ನಪ್ಪ ವೃತ್ತದಿಂದ ದುರ್ಗಮ್ಮ ಗುಡಿ ಹತ್ತಿರ ಅಮರ್ ಜವಾನ್ ಪುತ್ಥಳಿವರಗೆ ವೀರಯೋಧರನ್ನು ಸ್ಮರಿಸುವ ಮೇಣದ  ಮೆರವಣಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ಪಕ್ಷದ  ಜಿಲ್ಲಾ ಉಪಾಧ್ಯಕ್ಷ ವೀರಶೇಖರ್ ರೆಡ್ಡಿ,  ನಗರ ಅಧ್ಯಕ್ಷ ಕೆ.ಬಿ. ವೆಂಕಟೇಶ್ವರಲು, ನಗರ ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ, ಸುನಿಲ್ ಕುಮಾರ್, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ  ಅಡವಿಸ್ವಾಮಿ,  ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ,  ನಗರ ಅಧ್ಯಕ್ಷ ಅರುಣ್ ಬಾಲಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ  ಓಂ ಪ್ರಕಾಶ್,  ಸತೀಶ್ ಕುಮಾರ್ , ಪದಾಧಿಕಾರಿಗಳಾದ ಪವನ್ ಕುಮಾರ್, ಸಿದ್ದೇಶ್, ಶರಣಬಸವ ಗೌಡ ಅಶೋಕ್, ಸುಧಾಕರ್,ವಿನೋದ್,  ಚಂದ್ರಶೇಖರ್, ಸಾಗರ್,  ಜೀವನ್ ,  ಕೃಷ್ಣಮೋಹನ, ಶಿವಕುಮಾರ್, ಶ್ರೀನಿವಾಸ್,  ಕುಮಾರಸ್ವಾಮಿ,  ಮನೋಜ್ ಹಾಗೂ  ಯುವಮೋರ್ಚಾ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.