ಕಾರ್ಗಿಲ್ ವಿಜಯೋತ್ಸವದಲ್ಲಿಮಾಜಿ ಶಾಸಕ ಸೋಮಶೇಖರ ರೆಡ್ಡಿ ಭಾಗಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವೆ 1996 ರಲ್ಲಿ ನಡೆದ ಕಾರ್ಗಿಲ್  ಯುದ್ಧದಲ್ಲಿ ಜುಲೈ 26 ರಂದು ಭಾರತವು ವಿಜಯಶಾಲಿಯಾಗಿತ್ತು.
ಈ ಸವಿ ನೆನಪಿಗಾಗಿ ಇಂದು  ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯ್ತು.
ಎಸ್ಪಿ ಕಚೇರಿ ಬಳಿ ಇರುವ ಸ್ಮಾರಕದ ಬಳಿ  ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರದ ಬಿಜೆಪಿಯ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ.  ಮಹಾನಗರ ಪಾಲಿಕೆ ಸದಸ್ಯ  ಶ್ರೀನಿವಾಸ್  ಮೋತ್ಕರ್ ಮೊದಲಾದವರು ಭಾಗವಹಿಸಿ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ನಮಿಸಿದರು.