ಕಾರ್ಗಿಲ್ ಯೋಧರ ಬಲಿದಾನ ದೇಶ ವಾಸಿಗಳಿಗೆ ಸ್ಫೂರ್ತಿ

ನವದೆಹಲಿ,ಜು.೨೬- ಕಾರ್ಗಿಲ್ ಯುದ್ಧದಲ್ಲಿ ತ್ಯಾಗ ಬಲಿದಾನ ಮಾಡಿದ ಯೋಧರು, ಅವರ ಶೌರ್ಯ ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕಾರ್ಗಿಲ್ ವಿಜಯ್ ದಿವಸ್, ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯ ದಾಖಲಿದುವ ಸಮಯದಲ್ಲಿ ಅತ್ಯುನ್ನತ ತ್ಯಾಗ ಬಲಿದಾನ ನೀಡಿದ ಸೈನಿಕರ ಶೌರ್ಯ ಸ್ಮರಿಸಿದ್ದಾರೆ.
ವೀರ ಯೋಧರು ಸದಾ ಸ್ಪೂರ್ತಿಯಾಗಿ ಉಳಿಯುತ್ತಾರೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.೨೬ ನೇ ವಿಜಯ ದಿನದ ಅಂಗವಾಗಿ ವೀರ ಯೋಧರಿಗೆ ಗೌರವ ಸಲ್ಲಿಸಿ ಟ್ವೀಟ್ ಮಾಡಿರುವ ಅವರು ಶ್ರದ್ದಾಂಜಲಿ ಸಲ್ಲಿದ್ದಾರೆ.ಕಾರ್ಗಿಲ್ ವಿಜಯ್ ದಿವಸ್, ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಗುರುತಿಸುವ ಸಂದರ್ಭದಲ್ಲಿ, ಪ್ರಧಾನಿ ಮೋದಿ ಸೈನಿಕರ ಶೌರ್ಯವನ್ನು ನೆನಪಿಸಿಕೊಂಡಿದ್ದಾರೆ.”ಕಾರ್ಗಿಲ್ ವಿಜಯ್ ದಿವಸ್ ಭಾರತದ ಆ ಅದ್ಭುತ ಧೈರ್ಯಶಾಲಿಗಳ ವೀರಗಾಥೆಯನ್ನು ಮುನ್ನೆಲೆಗೆ ತರುತ್ತದೆ, ಅವರು ಯಾವಾಗಲೂ ದೇಶವಾಸಿಗಳಿಗೆ ಸ್ಮರಣೀಯ ಎಂದಿದ್ದಾರೆ.
ಭಾರತದ ಆ ಅದ್ಭುತ ಧೈರ್ಯಶಾಲಿಗಳ ವೀರಗಾಥೆ, ಅವರು ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿಯಾಗಿ ಉಳಿಯುತ್ತಾರೆ. ಈ ವಿಶೇಷ ದಿನದಂದು ನಅವರಿಗೆ ನನ್ನ ಹೃದಯಿಂದ ನಮಸ್ಕರಿಸುತ್ತೇನೆ,” ಎಂದು ತಿಳಿಸಿದ್ದಾರೆ.