ಕಾರ್ಖಾನೆ ಧೂಳಿನಿಂದ ಆಗುತ್ತಿರುವ ನಷ್ಟದ ಪರಿಹಾರಕ್ಕೆ ಆಗ್ರಹಿಸಿ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.29: ತಾಲೂಕಿನ ಪಿ.ಜಿ.ಎಂ ಮೆಧುಕಬ್ಬಿಣ  ಕಾರ್ಖಾನೆಯ ಧೂಳಿನಿಂದ ಹರಗಿನ ಡೋಣಿ ಗ್ರಾಮದ  ರೈತರ ಬೆಳೆಗಳಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರಕ್ಕಾಗಿ ಆಗ್ರಹಿಸಿ  ಎಐಕೆಕೆಎಂ ಎಸ್  ರೈತ ಸಂಘಟನೆಯಿಂದ ಇಂದು ಕಾರ್ಖಾನೆಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಈ ಕಾರ್ಖಾನೆಯಿಂದ ಗ್ರಾಮವಾದ ಹರಗಿನ ಡೋಣಿ ಇಂದು ಹಲವಾರು ಸಮಸ್ಯೆಗಳಿಗೆ ತುತ್ತಾಗಿದೆ,  ಕಾರ್ಖಾನೆಯಿಂದ ಬರುವ ದೂಳಿನ ಮಾಲಿನ್ಯದಿಂದ ಪ್ರತಿ ವರ್ಷ ರೈತರ ಬೆಳೆಗಳು
ಹಾಳಾಗುವುದಲ್ಲದೇ, ನಿರೀಕ್ಷಿತ ಫಲ ಸಿಗದೇ ರೈತರು ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದಾರೆ.
ರೈತರ ಬೆಳೆಗಳು ಮಾತ್ರವಲ್ಲದೇ, ರೈತರ ಆರೋಗ್ಯಕ್ಕೆ ಹಾನಿಕಾರಕವಾಗಿ, ಕ್ಯಾನ್ಸರ್, ಟಿ.ಬಿ ಮತ್ತು
ಇತರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಬಲಿಯಾಗುತ್ತಲೇ ಇದ್ದಾರೆ.
ರೈತರ ದನಕರು ಮತ್ತು ಕುರಿಗಳು ತಿನ್ನುವ ಹುಲ್ಲು ಮೇವು ದೂಳಿನಿಂದ ಕಲುಷಿತವಾಗಿ, ರೋಗ
ಬಂದು ಸಾವನ್ನಪ್ಪುತ್ತಿವೆ. ಇದರಿಂದ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ.
ಆದ್ದರಿಂದ ತಮ್ಮ ಕಾರ್ಖಾನೆಯು ನಿಯಾಮಾನುಸಾರ ದೂಳನ್ನು ಗಾಳಿಗೆ ಬಿಡದಂತೆ ಕ್ರಮಕೈಗೊಳ್ಳುವಂತೆ, ಮತ್ತು ಅಲ್ಲಿಯ ತನಕ
ರೈತರ ಈ ನಷ್ಟಕ್ಕೆ ಪರಿಹಾರ ಒದಗಿಸುವಂತೆ ಮಾಡಲು ತಾವುಗಳು ಗಮನ ಹಾಕಿ ಈ ಹಳ್ಳಿಯ ರೈತರ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕು. ಈ ಭಾಗದ ರೈತರು ತಮ್ಮ ಬಳಿ ಇರುವ ಸ್ವಲ್ಪ ಭೂಮಿಯನ್ನೇ ನಂಬಿ ಬದುಕುತ್ತಿರುವಂತವರು, ಅವರಿಗೆ ತಾವು ನೀಡುತ್ತಿರುವ ಪರಿಹಾರ ಧನ ಸರಿಹೋಗುತ್ತಿಲ್ಲ.  ಹಾಗಾಗಿ ಈ ಜನರ ಜೀವನ ನಿರ್ವಹಣೆಗಾಗಿ ಬೇಕಾಗುವ ಕನಿಷ್ಠ  ಪರಿಹಾರ ಧನವನ್ನು  ನೀಡಬೇಕೆಂದು.  ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ  ಆಗ್ರಹಿಸಿದೆ..
ಈ ಸಂದರ್ಭದಲ್ಲಿ ಸಂಘಟನೆಯ  ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಜಿಲ್ಲಾ ಉಪಾಧ್ಯಕ್ಷ ಈರಣ್ಣ, ಜಿಲ್ಲಾ ಸಮಿತಿ ಸದಸ್ಯ ಸಿದ್ದಲಿಂಗ,ಗ್ರಾಮಸ್ತರಾದ ದಸ್ಥಗಿರಿ, H ವೀರೇಶ್, ಬಸವನಗೌಡ, ಮೂಲೆಮನೆ ವಿರುಪಾಕ್ಷಿ, ವೀರೇಶ್, ಪ್ರಕಾಶ್, ಬಸವರಾಜ್, ತಿಮ್ಮಯ್ಯ ಅಗಸರ ಸೇರಿದಂತೆ ಇತರರಿದ್ದರು.