ಕಾರ್ಖಾನೆಗಳ ಧೂಳಿನ ವಿರುದ್ದ ಕುಡುತಿನಿ ‌ನಾಗರೀಕರ ಪ್ರತಿಭಟನೆ

ಬಳ್ಳಾರಿ ಜ. .02: ಸಮೀಪದ ಕುಡುತಿನಿ ಪಟ್ಟಣದ ಸುತ್ತಮುತ್ತಲಿರುವ ಕಾರ್ಖಾನೆಗಳನ್ನು ಬಂದ್ ಮಾಡುವಂತೆ ಕುಡುತಿನಿ ಪಟ್ಟಣದ ಸಾರ್ವಜನಿಕರು ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳು ಇಂದು‌ ರಾಷ್ಟ್ರೀಯ ಹೆದ್ದಾರಿ 63 ಬಂದ್ ಮಾಡಿ
ಪ್ರತಿಭಟನೆ ನಡೆಸಿದವು.
ಪಟ್ಟಣದ ಸುತ್ತಮುತ್ತ ಕಾರ್ಖಾನೆಗಳು ಹೊರ ಸೋಸುವ ಹೋಗೆ ಮತ್ತು ಧೂಳು ವಾಯು ಮಾಲಿನ್ಯದಿಂದ ಪ್ರತಿ ಮನೆಗೆ ಹೋಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ ಚಿಕ್ಕ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಅಲರ್ಜಿ ಉಂಟಾಗುತ್ತಿದೆ
ನೀರಿನಲ್ಲಿ ಧೂಳು ಮಿಶ್ರಣ ವಾಗಿ ಜನರ ಜೀವಕ್ಕೆ ಕುತ್ತು ಬರುತ್ತಿದೆ. ಈಗಾಗಲೇ ಪಟ್ಟಣದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅನೇಕ ಜನರು ಚಿಕಿತ್ಸೆಯ ಒಳಗಾಗಿದ್ದಾರೆ. ಇನ್ನೂ ಕೆಲ ಜನ ಸಾವನ್ನಪ್ಪಿದ್ದಾರೆ. ಕಾರ್ಖಾನೆಗಳಿಂದ ಇಂತಹ ಸಮಸ್ಯೆಗಳು ಆಗುತ್ತಿದ್ದ ರು ಜಿಲ್ಲಾಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಕಾರ್ಖಾನೆಗಳ ಕೈಗೊಂಬೆ ಆಗಿದ್ದಾರೆ ಎಂದು ಜನ‌ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಮಾಲೀಕರು ನೀಡುವ ವರದಿ ತಪ್ಪಿನಿಂದ ಕೂಡಿದೆ. ಧೂಳಿನಿಂದ ಸಮಸ್ಯೆ ಇದ್ರೂ ಬಂದ್ ಮಾಡದೇ ಇರುವುದು ನಿಜಕ್ಕೂ ದುರಂತ ಎಂದು ಆರೋಪಿಸಿದರು. ಅಲ್ಲದೆ ಧೂಳು ಮತ್ತು ಹೊಗೆಯಿಂದ ಪಟ್ಟಣದ ಕುಡಿಯುವ ನೀರಿನ ಕೆರೆಯಲ್ಲಿ ಮೀನುಗಳು ಸಾಯುತ್ತಿದ್ದವೇ ಎಂದರು.
ಜಿಲ್ಲಾಧಿಕಾರಿಗಳು ನಮ್ಮ ಮುಂದೆ ಹೋದರು ನಮ್ಮ ಸಮಸ್ಯೆ ವಿಚಾರಣೆ ಮಾಡದೇ ಹಾಗೆ ಹೋಗುತ್ತಿದ್ದಾರೆ. ಸ್ವಲ್ಪ ಆದರೂ ಅವರಿಗೆ ಬಮಾನವೀಯತೆ ಇಲ್ಲದಾಗಿದೆ. ಕುಡುತಿನಿ ಸುತ್ತಮುತ್ತ 6 ಕಾರ್ಖಾನೆಗಳ ಕುಟುಂಬ ಸಾಗಿಸುವುದಕ್ಕೆ 6033 ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆ ತಕ್ಷಣ ಕಾರ್ಖಾನೆಗಳ ನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಾರಂಭದಲ್ಲಿ ತಿಮ್ಮಲಾಪುರ ಗ್ರಾಮದ ಕಾರ್ಖಾನೆಗಳ ಮೂಲಕ ವೇಣಿ ವೀರಾಪುರ ಕಾರ್ಖಾನೆಗಳ ಮಾರ್ಗಕ್ಕೆ ಕಾಲ್ನಡಿಗೆ ನಡೆಸುವುದರ ಮೂಲಕ ಕುಡುತಿನಿ ನಡೆ ಆರೋಗ್ಯದ ಕಡೆ ಎಂಬ ಘೋಷೆಣೆ ಕೂಗುತ್ತ ಪ್ರತಿಭಟನೆ ನಡೆಸಿದರು.
ಕಾರ್ಖಾನೆಗಳ ಮುತ್ತಿಗೆ ಹಾಕಲು ಹೊರಟ ಜನರನ್ನು ಪೊಲೀಸರು ತಡೆಹಿಡಿದು ಮನವೊಲಿಸಿ ಮಾತುಕತೆ ನಡೆಸಿದರು.