
ಸಂಜೆವಾಣಿ ವಾರ್ತೆ
ಸಂಡೂರು : ಮಾ: 29: ಗಣಿಕಂಪನಿಗಳ ಹಾಗೂ ಕೈಗಾರಿಕೆಗಳ ಕಾರ್ಯಾಚರಣೆಯಿಂದ ಉಂಟಾಗುವ ಕಪ್ಪು ಧೂಳು ಹಾಗೂ ಕಾರ್ಖಾನೆಗೆ ಸರಕು ಸಾಗಿಸುವ ವಾಹನಗಳ ಸಂಚಾರದಿಂದ ಉಂಟಾಗುವ ಧೂಳು. ಕೃಷಿ ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಗಳ ಮೇಲೆ ಬೀಳುವುದರಿಂದ ಬೆಳೆಗಳಿಗೆ ಹಾನಿ ಉಂಟಾಗಿ ಆರ್ಥಿಕವಾಗಿ ನಷ್ಟ ಹಾಗೂ ಕೃಷಿಗೆ ವೆಚ್ಚಮಾಡಿದ ಲಕ್ಷಾಂತರ ಹಣ ಕೈಗೆ ಸಿಗದೇ ರೈತರು ಸಾಲದ ಶೂಲದಲ್ಲಿ ಬಿದ್ದು ಆತ್ಮ ಹತ್ಯೆಯಂತಹ ಹಾದಿಯನ್ನು ಹಿಡಿಯುವಂತಹ ಸ್ಥಿತಿ ಉಂಟಾಗಿದೆ ಎಂದು ರೈತ ಮುಖಂಡ ಹಾಗೂ ನರಸಿಂಗಾಪುರ ಗ್ರಾಮದ ರೈತ ಕಾಡಪ್ಪ ತಿಳಿಸಿದರು.
ಅವರು ತಾಲೂಕಿನ ರೈತ ಸಂಘ, ನರಸಿಂಗಾಪುರ ಗ್ರಾಮ ಘಟಕ ಹಾಗೂ ರೈತರು ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಿ, ಮಾತನಾಡಿ ವಿಪರೀತ ಧೂಳಿನಿಂದಾಗಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ಅರೋಗ್ಯ ಸಮಸ್ಯೆ ಉಂಟಾಗುತ್ತಿರುವುದನ್ನ ತಿಳಿಸಿ ಕಾರ್ಖಾನೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗೆ ನೇರ ಮನವಿ ಹಾಗೂ ದೂರವಾಣಿಯ ಮೂಲಕ ಪರಿಸರ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ ಪರಿಣಾಮ ಕರ್ನಾಟ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು 15-03-2023 ರಂದು ಸ್ಥಳ ಪರಿವೀಕ್ಷಣೆ ನಡೆಸಿ ಕೆಳಕಂಡ ಅಂಶಗಳನ್ನು ಗಮನಿಸಲಾಗಿರುತ್ತದೆ. ಗ್ರಾಮದವರು ಹಾಜರಿದ್ದು ಕಾರ್ಖಾನೆ ಹೊರಹೊಮ್ಮುವ ಕಪ್ಪು ಹೊಗೆ ಹಾಗೂ ವಾಹನಗಳ ಸಂಚಾರದಿಂದ ಉಂಟಾಗುವ ಧೂಳು ಬೆಳೆಗಳ ಮೇಲೆ ಬಿದ್ದಿರುವುದು ಗಮನಿಸಲಾಗಿದೆ. ವಾಹನಗಳ ಸಂಚಾರದಿಂದ ಉಂಟಾಗುವ ಧೂಳನ್ನು ನಿಯಂತ್ರಿಸಲು ನೀರಿನ ಸಿಂಪಡೆನೆ ವ್ಯವಸ್ಥೆ ಮಾಡದೇ ಇರುವುದನ್ನು ಗಮನಿಸಲಾಗಿದೆ. ಸ್ಥಳದಲ್ಲೇ ಹಾಜರಿದ್ದ ದೂರುದಾರರ ವಾಹನಗಳು ಸಂಚಾರದಿಂದ ಧೂಳು ಉಂಟಾಗಿ ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನಿನಲ್ಲಿ ಬೆಳೆದ ಬೆಳೆಗಳ ಮೇಲೆ ಧೂಳು ಬೀಳುವುದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭಿವುಸತ್ತಿರುವುದು ಗಮನಿಸಿದ್ದಾರೆ ಅದರೆ ಯಾವುದೇ ಪರಿಣಾಮವಾಗಿಲ್ಲ,
ಈ ಎಲ್ಲಾ ಅಂಶಗಳನ್ನು ಅವಲೋಕಸಿದಾಗ ಪರಿವೀಕ್ಷಣ ಸಮಯದಲ್ಲಿ ಗಮನಿಸಿದಾಗ ರಾತ್ರಿ ಸಮಯದಲ್ಲಿ ತಮ್ಮ ಕೈಗಾರಿಕೆಯಿಂದ ವಾಯು ಮಾಲಿನ್ಯ ನಿಯಂತ್ರಣ ಉಪಕರಣಗಳನ್ನು ಚಾಲನೆಯಲ್ಲಿ ಇಡದೇ ನೆರವಾಗಿ ಮಲೀನ ಕಾರಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡಿ ವಾಯು ಮಾಲಿನ್ಯ ಉಂಟು ಮಡುತಿರುವುದು ಧೂಳನ್ನ ವಿಫಲವಾಗಿ ಕಾರ್ಯಚರಣೆ ನಡೆಸಿ ದೂರುದಾರರ ಕೃಷಿ ಜಮೀನು ಮತ್ತು ಸುತ್ತ ಮುತ್ತಲ ಪ್ರದೇಶದಲ್ಲಿಮಾಲಿನ್ಯ ಉಂಟು ಮಾಡುತ್ತಿರುವುದು ಕಂಪನಿಯ ಬೇಜವಬ್ದಾರಿಯನ್ನ ತೋರಿಸುತ್ತದೆ. ಕಾನೂನು ರೀತಿಯ ಏಕೆ ಕ್ರಮ ಜರುಗಿಸಬಾರದು ಎಂದು ಕಾರಣ ಕೇಳುವ ನೋಟಿಸನ್ನು ಜಾರಿ ಮಾಡಲಾಗಿದ್ದು, ಅದರೆ ಯಾವುದೇ ಕ್ರಮವಾಗಿಲ್ಲ. ಅದ್ದರಿಂದ ತಕ್ಷಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾಧ ಕಾಡಪ್ಪ ಮತ್ತು ಪರಮೇಶ್ವರಪ್ಪ ರಂಜಿತ ಜಿಲ್ಲಾ ಅರ್ಧಯಕ್ಷ ಎಂ.ಎಲ್.ಕೆ. ನಾಯ್ಡು ಕೆಂಚಪ್ಪ, ಶಾಂತಪ್ಪ, ಮಹಾದೇವಗೌಡ, ಜಿ.ಕೆ. ರಮೇಶ್ ನೀಲಕಂಠ, ಶಿವು ವಿರುಪಾಕ್ಷ ಮೌನೇಶ ಸೈಯದ್ ಸಾಬ್ ಉಪಸ್ಥಿತರಿದ್ದರು.