ಕಾರ್ಕಳದ ಭರತ್‌ಗೆ ಪ್ರಥಮ ರ್‍ಯಾಂಕ್

ಕಾರ್ಕಳ, ಎ.೨೧- ಮೈಸೂರಿನ ಜೆ.ಎಸ್.ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳದ ಭರತ್ ಎಸ್. ಅವರು ಪ್ರಥಮ ರ್‍ಯಾಂಕ್ ಸಹಿತ ಚಿನ್ನದ ಪದಕವನ್ನು ಪಡೆದಿರುವರು. ಈ ಸಾಧನೆಯೊಂದಿಗೆ ಶ್ರೀ ಬಿ.ಎಸ್. ಕೇಶವ ಕಿಶನ್ ಮೆಮೋರಿಯಲ್ ಎಂಡೋಮೆಂಟ್ ಮೆಡಲ್‌ನನ್ನು ಅವರು ಗಳಿಸಿರುವರು. ಇವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶಂಕರನ್ ಪಿ ಹಾಗೂ ಸತಿದೇವಿ ಕೆ ಇವರ ಪುತ್ರ.