ಕಾರೆಕಲ್ಲಿನಲ್ಲಿ ಸಿದ್ದರಾಮೇಶ್ವರ ಪುರಾಣ ಪ್ರವಚನ ಆರಂಭ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.02: ತಾಲೂಕಿನ ಕಾರೆಕಲ್ಲು ಗ್ರಾಮದಲ್ಲಿ ಸೊನ್ನಲಿಗೆಯ ಶ್ರೀ ಸಿದ್ದರಾಮೇಶ್ವರ ಪುರಾಣವನ್ನು ಈ ತಿಂಗಳ 27 ರ ವರೆಗೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದೆ.
ಮದಿರೆಯ ರಾಚಯ್ಯಸ್ವಾಮಿ ಅವರು ಪುರಾಣ ಪ್ರವಚನ ಮಾಡಲಿದ್ದಾರೆ. ಕೊತ್ತಲಚಿಂತೆಯ ಶರಣಕುಮಾರ ಗವಾಯಿ ಅವರಿಂದ ಪುರಾಣದ ವಚನಕರರಾಗಿ, ಬಳ್ಳಾರಿಯ ಸುಧಾಕರ್ ತಬಲವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿದಿನ ಸಂಜೆ ಪುರಾಣ ಪ್ರವಚನ ಇರುತ್ತದೆ. ಅದೇರೀತಿ  ಗ್ರಾಮದಲ್ಲಿ ಈ ತಿಂಗಳ 30 ರಂದು 9 ನೇ ವರ್ಷದ ವೀರಭದ್ರೇಶ್ವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾಸೋಹ ಸೇವಾ ಸಮಿತಿ ತಿಳಿಸಿದೆ.

Attachments area