ಕಾರು ಹಳ್ಳಕ್ಕೆ ಬಿದ್ದು ಮೂವರು ಸಾವು

ಕೆ.ಆರ್.ಪೇಟೆ.ಫೆ.೦೪:ಅತಿ ವೇಗದ ಚಾಲನೆಯಿಂದ ಕಾರೊಂದು ಹಳ್ಳಕ್ಕೆ ಮಗುಚಿ ಬಿದ್ದ ಪರಿಣಾಮ ಪಟ್ಟಣದ ಮೂವರು ಯುವಕರ ದಾರುಣ ಸಾವನಪ್ಪಿರುವ ಘಟನೆ ತಡರಾತ್ರಿ ಅಕ್ಕಿಹೆಬ್ಬಾಳು ಹೊಸ ಸೇತುವೆ ಬಳಿ ನಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ನಿವಾಸಿಗಳಾದ ಚೇತನ್ ಕುಮಾರ್ ಪುತ್ರ ಅನಿಚಿತ್(೨೦),ಬೈಲುಕುಪ್ಪೆ ನಿವಾಸಿ ಸೋಮಶೇಖರ್ ಪುತ್ರ ಪವನ್ ಶೆಟ್ಟಿ(೧೯),ಸರ್ವೇಯರ್ ಅಶೋಕ್ ಕುಮಾರ್ ಪುತ್ರ ಚಿರಂಜೀವಿ (೨೦) ಮೃತ ದುರ್ಧೈವಿ ಯುವಕರು.
ವಿಜಯ್ ಕುಮಾರ್ ಪುತ್ರ ಸಾಗರ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕೂ ಜನ ಯುವಕರು ಕಾರಿನಲ್ಲಿ ಭೇರ್ಯ ಕಡೆಯಿಂದ ಕೆ.ಆರ್.ಪೇಟೆಗೆ ಬರುತ್ತಿದ್ದ ವೇಳೆ ಅಕ್ಕಿಹೆಬ್ಬಾಳು ಹೊಸ ಸೇತುವೆಯ ಬಳಿ ಈ ಅವಘಡ ಸಂಭವಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಠಾಣೆಯ ಸಿಪಿಐ ಆನಂದೇಗೌಡ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತರ ಶವಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ . ಮಕ್ಕಳನ್ನು ಕಳೆದುಕೊಂಡ ಮೂರೂ ಕುಟುಂಬಗಳ ಮನೆಗಳಲ್ಲಿ ಶೋಕ ಮಡುಗಟ್ಟಿದೆ.