ಕಾರು ಹರಿದು 18 ಕುರಿಗಳು ಸಾವು

ವಿಜಯಪುರ,ಮಾ.3-ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಕ್ರಾಸ್ ಬಳಿ ರಸ್ತೆ ದಾಟುವ ವೇಳೆ ಕಾರು ಹರಿದು 18 ಕುರಿಗಳು ಸಾವನ್ನಪ್ಪಿವೆ.
ಮುತ್ತಗಿ ಗ್ರಾಮದ ನಿವಾಸಿ ಆನಂದ ಎಂಬುವರಿಗೆ ಸೇರಿದ ಕುರಿಗಳು ಇವಾಗಿದ್ದು, ಘಟನೆ ನಂತರ ಕಾರು ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ.